Wednesday, June 3, 2026
Homeಕರಾವಳಿಮಂಗಳೂರುಮಂಗಳೂರು: ಓವರ್ ಟೇಕ್ ಮಾಡಲು ಹೋಗಿ ಖಾಸಗಿ ಬಸ್ ಗಳ ನಡುವೆ ಅಪಘಾತ

ಮಂಗಳೂರು: ಓವರ್ ಟೇಕ್ ಮಾಡಲು ಹೋಗಿ ಖಾಸಗಿ ಬಸ್ ಗಳ ನಡುವೆ ಅಪಘಾತ

- Advertisement -
- Advertisement -

ಮಂಗಳೂರು: ಓವರ್ ಟೇಕ್ ಮಾಡುವ ಎರಡು ಖಾಸಗಿ ಬಸ್ ಗಳ ನಡುವೆ ಮಂಗಳೂರಿನಲ್ಲಿ ಅಪಘಾತ ಸಂಭವಿಸಿದೆ.

ಜ್ಯೋತಿ ಸರ್ಕಲ್ ನಲ್ಲಿ ಮಂಗಳೂರಿನಿಂದ ಉಡುಪಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವೇಳೆ ಓವರ್ ಟೇಕ್ ಮಾಡಲು ಹೋಗಿ ಅಪಘಾತ ನಡೆದಿದೆ.

ಅಪಘಾತ ಸಂಭವಿಸಿದ ಬಳಿಕ ಮಧ್ಯರಸ್ತೆಯಲ್ಲೇ ಬಸ್ ನಿಲ್ಲಿಸಿ ಎರಡೂ ಬಸ್ ಗಳ ಸಿಬ್ಬಂದಿ ಮಾತಿನ ಚಕಮಕಿ ನಡೆದಿದೆ.

ರಸ್ತೆ ಮಧ್ಯದಲ್ಲೇ ಬಸ್ ನಿಲ್ಲಿಸಿ ಸಿಬ್ಬಂದಿ ವಾಗ್ವಾದ ನಡೆಸಿದ ಕಾರಣ ಉಳಿದ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಕೆಲವು ಹೊತ್ತು ಕಿರಿ ಕಿರಿ ಉಂಟಾಗಿತ್ತು.

ಖಾಸಗಿ ಬಸ್ ಸಿಬ್ಬಂದಿಗಳ ನಡುವಿನ ಟೈಮಿಂಗ್ಸ್ ಫೈಟ್ ನಿಂದಾಗಿ ನಿಯಮ ಉಲ್ಲಂಘನೆ ಮಾಡಿ ಬೇಕಾಬಿಟ್ಟಿ ಬಸ್ ಓಡಿಸುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

- Advertisement -

Latest News

error: Content is protected !!