Wednesday, July 15, 2026
Homeತಾಜಾ ಸುದ್ದಿರಸ್ತೆಯಲ್ಲೇ ಕುಳಿತು ಅಭಿಮಾನಿಯನ್ನು ಮಾತನಾಡಿಸಿದ ದರ್ಶನ್: ಡಿ ಬಾಸ್ ಸರಳತೆಗೆ ಭಾರೀ ಮೆಚ್ಚುಗೆ, ವಿಡಿಯೋ ವೈರಲ್

ರಸ್ತೆಯಲ್ಲೇ ಕುಳಿತು ಅಭಿಮಾನಿಯನ್ನು ಮಾತನಾಡಿಸಿದ ದರ್ಶನ್: ಡಿ ಬಾಸ್ ಸರಳತೆಗೆ ಭಾರೀ ಮೆಚ್ಚುಗೆ, ವಿಡಿಯೋ ವೈರಲ್

- Advertisement -
- Advertisement -

ಬೆಂಗಳೂರು: ನಟ ದರ್ಶನ್ ತಾನೊಬ್ಬ ಸರಳ ವ್ಯಕ್ತಿ, ಸ್ಟಾರ್ ಅನ್ನೋ ಹಮ್ಮು ಬಿಮ್ಮು ಇಲ್ಲ ಅನ್ನೋದನ್ನು ಅದೆಷ್ಟೋ ಬಾರಿ ತೋರಿಸಿಕೊಟ್ಟಿದ್ದಾರೆ, ಇದೀಗ ಅಂತಹದ್ದೇ ಘಟನೆಯೊಂದು ನಡೆದಿದೆ.

ಹೌದು.. ಬೆಂಗಳೂರಿನಲ್ಲಿ ದರ್ಶನ್ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದುದನ್ನು ಗಮನಿಸಿದ ವಿಶೇಷಚೇತನ ಆಟೋ ಚಾಲಕರೊಬ್ಬರು ಅವರನ್ನು ಹಿಂಬಾಲಿಸಿದ್ದಾರೆ. ಇದನ್ನು ಗಮನಿಸಿದ ದರ್ಶನ್ ಕಾರು ನಿಲ್ಲಿಸಿ ವಿಶೇಷ ಅಭಿಮಾನಿಯ ಜೊತೆ ರಸ್ತೆಯಲ್ಲೇ ಕುಳಿತು ಮಾತನಾಡಿದ್ದಾರೆ,

ಸ್ವತಃ ತಾವೇ ಕೆಳಗೆ ಕುಳಿತುಕೊಂಡು ದರ್ಶನ್ ಆತ್ಮೀಯವಾಗಿ ಅಭಿಮಾನಿಯನ್ನು ಮಾತನಾಡಿಸಿದ್ದು ಅಲ್ಲದೇ ಅವರೊಂದಿಗೆ ಫೋಟೋ, ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಅಲ್ಲದೇ ಕುತೂಹಲದಿಂದ ಡಿ ಬಾಸ್ ನೀವು ಬ್ರೇಕ್ ಹೇಗೆ ಹಾಕ್ತೀರಾ, ಗಾಡಿ ಹೇಗೆ ಓಡಿಸ್ತೀರಾ ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಇನ್ನು ಡಿ ಬಾಸ್ ಸರಳತೆ ಕಂಡು ಅಭಿಮಾನಿಗಳ ಕಣ್ಣಾಲಿಗಳು ತುಂಬಿ ಬಂದಿದ್ದವು. ಇತ್ತ ಅಭಿಮಾನಿಗಳು ಡಿ ಬಾಸ್ ವಿಶೇಷ ಅಭಿಮಾನಿಯೊಂದಿಗಿದ್ದ ಫೋಟೋವನ್ನು ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.

- Advertisement -

Latest News

error: Content is protected !!