Thursday, June 4, 2026
Homeತಾಜಾ ಸುದ್ದಿಜಗ್ಗೇಶ್ ಕ್ಷಮೆಯಾಚಿಸಿದ ಛಾಲೆಂಜಿಂಗ್ ಸ್ಟಾರ್ ದರ್ಶನ್ : ಮನಸ್ಸು ಹಗುರವಾಯ್ತು ಧನ್ಯವಾದ ಅಂದ ನವರಸ ನಾಯಕ

ಜಗ್ಗೇಶ್ ಕ್ಷಮೆಯಾಚಿಸಿದ ಛಾಲೆಂಜಿಂಗ್ ಸ್ಟಾರ್ ದರ್ಶನ್ : ಮನಸ್ಸು ಹಗುರವಾಯ್ತು ಧನ್ಯವಾದ ಅಂದ ನವರಸ ನಾಯಕ

- Advertisement -
- Advertisement -

ಬೆಂಗಳೂರು :ದರ್ಶನ್ ಹಾಗೂ ನವರಸನಾಯಕ ಜಗ್ಗೇಶ್ ನಡುವಿನ ಜಗಲ ದಿನಕ್ಕೊಂದು ರೀತಿ ಸುದ್ದಿಯಾಗುತ್ತಲೇ ಇತ್ತು. ಇಷ್ಟೆಲ್ಲಾ ಆದ್ರೂ ದರ್ಶನ್ ಮಾತ್ರ ಏನೂ ಮಾತನಾಡುತ್ತಿಲ್ಲ ಎಂದು ಜಗ್ಗೇಶ್ ಅಸಮಾಧಾನಕೂಡ ಹೊರ ಹಾಕಿದ್ರು. ಇದೀಗ ದರ್ಶನ್ ಜಗ್ಗೇಶ್ ಅವರ ಕ್ಷಮೆಯಾಚಿಸಿದ್ದಾರೆ. ಹಾಗಾಗಿ ದರ್ಶನ್ ಗೆ ಜಗ್ಗೇಶ್ ಧನ್ಯವಾದ ಅರ್ಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡುವ ಜಗ್ಗೇಶ್, ಸಮಯ ಸಂದರ್ಭ ವಿಘ್ನಗಳಿಗೆ ಸಮಯ ಸಂದರ್ಭ ವಿಷ ಘಳಿಗೆ ಪ್ರೀತಿ ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯೆ, ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ! ಕನ್ನಡಕ್ಕೆ ಒಗ್ಗಟ್ಟಿರಲಿ! ಧನ್ಯವಾದ ದರ್ಶನ್ .ಧನ್ಯವಾದ ಮಾಧ್ಯಮ ಮಿತ್ರರಿಗೆ, ಧನ್ಯವಾದ ಕನ್ನಡ ಮನಗಳಿಗೆ, ಇನ್ನೆಂದೂ ಇಂಥಾ ದಿನ ಬಾರದಿರಲಿ ಎಂದಿದ್ದಾರೆ,

ಇನ್ನು ಈ ಪ್ರಕರಣದಲ್ಲಿ ತನ್ನ ತಪ್ಪಿಲ್ಲದಿದ್ದರೂ ಅಭಿಮಾನಗಳ ಪರವಾಗಿ ಕ್ಷಮೆಯಾಚಿಸಿದ ದರ್ಶನ್ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದರ್ಶನ್ ನಿಜವಾಗಲೂ ಹೃದಯವಂತ ಅಂತಾ ಖಾಸಗಿ ಚಾನೆಲ್ ಒಂದಕ್ಕೆ ಅವರು ನಿನ್ನೆ ನೀಡಿರುವ ಸಂದರ್ಶನ ತುಣುಕೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹರಿ ಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

- Advertisement -

Latest News

error: Content is protected !!