Sunday, May 12, 2024
Homeಕರಾವಳಿಪಂಚಾಯತ್ ನಿಂದ ದಿಲ್ಲಿವರೆಗೆ ಬಿಜೆಪಿ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶ್ರಮ‌ವೇ ಕಾರಣ; ರಾಜೇಶ್ ನಾಯ್ಕ್

ಪಂಚಾಯತ್ ನಿಂದ ದಿಲ್ಲಿವರೆಗೆ ಬಿಜೆಪಿ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶ್ರಮ‌ವೇ ಕಾರಣ; ರಾಜೇಶ್ ನಾಯ್ಕ್

spot_img
- Advertisement -
- Advertisement -

ಬಂಟ್ವಾಳ: ಗ್ರಾಮ ಪಂಚಾಯತ್ ನಿಂದ ದಿಲ್ಲಿವರೆಗೆ ನಿರಂತರವಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಕಾರ್ಯಕರ್ತರ ಶ್ರಮ‌ವೇ ಕಾರಣ, ಕಾರ್ಯಕರ್ತರ ಶ್ರಮ ವ್ಯರ್ಥವಾಗದ ರೀತಿಯಲ್ಲಿ ಚಿಂತನೆಗೆ ಶಕ್ತಿ ತುಂಬಿ ಅಭಿವೃದ್ಧಿ ಕಾರ್ಯದ ಜೊತೆ ಗೌರವಯುತ ಬದುಕನ್ನು ನೀಡುವ ಕೆಲಸ ಪ್ರಮಾಣಿಕವಾಗಿ ಮಾಡುತ್ತೇನೆ.ರಾಷ್ಟ್ರದ ಚಿಂತನೆಯ ದೃಷ್ಟಿಯಿಂದ ,ದೇಶದ ಸೇವೆಗಾಗಿ ಬಿಜೆಪಿ ಪಕ್ಷ ಸದೃಡವಾಗಬೇಕು ಎಂದು ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಅವರು ಕುಕ್ಕಿಪಾಡಿ ಗ್ರಾ.ಪ.ವ್ಯಾಪ್ತಿಯ 5 ಬೂತ್ ಅಧ್ಯಕ್ಷರುಗಳ ಮನೆಗೆ ಭೇಟಿ ನೀಡಿ ನಾಮಫಲಕ ಅನಾವರಣ ಮಾಡಿದ ಬಳಿಕ ಮಾತನಾಡಿದ ಅವರು,ಪಕ್ಷ ಸಂಘಟನೆಯ ಗಂಭೀರತೆಯನ್ನು ಅರಿತುಕೊಂಡು ಕಾರ್ಯಕರ್ತರ ಜೊತೆಯಲ್ಲಿ ಪಕ್ಷದ ನಾಯಕರು ಜೊತೆಯಾಗುತ್ತಾರೆ.ನಾಮಫಲಕ ಅನಾವರಣ ಕಾರ್ಯಕ್ರಮ ಕೇವಲ ಕಾಟಾಚಾರದ ಪ್ರವಾಸವಾಗದೆ , ಕಾರ್ಯಕರ್ತರು ಉದಾಸೀನ ಮನೋಭಾವದಿಂದ ಹೊರಬಂದು ಎಚ್ಚರಿಕೆಯಿಂದ ಸಂಘಟನೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದರು.ಕಾರ್ಯಕರ್ತನಿಗೆ ಗೌರವ ನೀಡುವ ಜೊತೆಗೆ ಪಕ್ಷ ಸಂಘಟನೆಯ ಮಹತ್ತರ ಜವಾಬ್ದಾರಿಯನ್ನು ನೀಡಿದೆ ಎಂದರು.

ರಾಷ್ಟ್ರೀಯ ಚಿಂತನೆಯ ಅನಾವರಣ ಮಾಡುವ ಉದ್ದೇಶದಿಂದ ಹಿರಿಯ ನಾಯಕರು ಬಿಜೆಪಿ ಪಕ್ಷವನ್ನು ಕಟ್ಟಿದ್ದಾರೆ. ಇಂತಹ ಮೌಲ್ಯವುಳ್ಳ ಪಕ್ಷದ ಸಂಘಟನೆಗೆ ಕಾರ್ಯಕರ್ತರ ಸೇವೆ ಅಗ್ರಗಣ್ಯ ಸ್ಥಾನವನ್ನು ಪಡೆದಿದೆ ಎಂದರು.

87 ಕೋಟಿ ಉಚಿತವಾಗಿ ಕೋವಿಡ್ ವ್ಯಾಕ್ಸಿನೇಷನ್‌ ನೀಡಿದ ಶ್ರಮದ ಫಲವಾಗಿ ಜಗತ್ತಿನಲ್ಲಿ ಕೋವಿಡ್ ವಿಚಾರದಲ್ಲಿ ಯಶಸ್ಸು ಗಳಿಸಿದ್ದಲ್ಲದೆ, ಜಗತ್ತಿನಲ್ಲಿ ಅಗ್ರಗಣ್ಯ ಸ್ಥಾನವನ್ನು ಪ್ರಧಾನಿ ಮೋದಿ ಪಡೆದಿದ್ದಾರೆ.ಜಗತ್ತಿಗೆ ಕೋವಿಡ್ ಸಂಬಂಧಿಸಿದ ಔಷಧಿಗಳನ್ನು ರಫ್ತು ಮಾಡುವ ದೇಶ ಭಾರತ ಎಂಬುದೇ ಹೆಮ್ಮೆಯ ವಿಷಯ ಎಂದರು.

ದೇಶದ ಆಪತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿರೋಧ ಪಕ್ಷಗಳು ಜೊತೆಯಾಗಿ ಕೆಲಸ ಮಾಡುವ ಸಂಸ್ಕಾರ ಆಗಬೇಕೆ ಹೊರತು ಕಾಲೆಳೆಯುವ ಕೆಲಸ ಆಗಬಾರದು ಎಂದರು. ರೈತರ ಪರವಾಗಿರುವ , ಕೇಂದ್ರ , ರಾಜ್ಯ ಸರಕಾರ ನೀಡಿದ ಸವಲತ್ತುಗಳ ಮನವರಿಕೆ ಮಾಡುವ ಕೆಲಸ ಕಾರ್ಯಕರ್ತರ ಮೂಲಕ ನಡೆಯಬೇಕು.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 600. ಕೋಟಿಗೂ ಅಧಿಕ ಪ್ರಮಾಣದ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತದೆ ಎಂಬ ಭರವಸೆಯನ್ನು ನೀಡುತ್ತೇನೆ, ಈ ಬಗ್ಗೆ ಯಾವುದೇ ಸಂದೇಹ ಬೇಡ, ಕಾರ್ಯಕರ್ತರು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಎಂದರು.

ನಾಮಫಲಕ ಅನಾವರಣ ಕಾರ್ಯಕ್ರಮಕ್ಕೆ ಬೂತ್ ಅಧ್ಯಕ್ಷರ ಮನೆಗೆ ಬೇಟಿ ನೀಡಿದ ಸಂದರ್ಭದಲ್ಲಿ ಬಂದ ಮನವಿಗಳಿಗೆ, ಸಮಸ್ಯೆ ಗಳಿಗೆ ಪ್ರಥಮ ಆಧ್ಯತೆಯಲ್ಲಿ ಪರಿಹಾರ ನೀಡುವ ಕೆಲಸ ಮಾಡುತ್ತೇನೆ ಎಂದರು.

ಅಲ್ಪಸಂಖ್ಯಾತ ವರ್ಗದ ಒಲೈಕೆ ರಾಜಕಾರಣ ಕಾಂಗ್ರೇಸ್ ಸಂಸ್ಕೃತಿ ಯಾಗಿದೆ ಎಂದು ಅವರು ಹೇಳಿದರು.

ಕುಕ್ಕಿಪಾಡಿ ಗ್ರಾಮದ ಬೂತ್ ನಂ. 7 ರ ಅಧ್ಯಕ್ಷ ನಿತಿನ್ ಪೂಜಾರಿ, ಬೂತ್ ನಂ.9 ರ ಅಧ್ಯಕ್ಷ ಗಂಗಾಧರ ಗೌಡ ಕುಕ್ಕೇಡಿ, ಬೂತ್ ನಂ.8 ರ ಅಧ್ಯಕ್ಷ ಶಿವಾನಂದ ಪೂಜಾರಿ ಕೆಂತಲೆ , ಎಲಿಯನಡುಗೋಡು ಗ್ರಾಮದ ಬೂತ್ ನಂ.11 ರ ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರು, ಬೂತ್ ನಂ.10 ರ ಅಧ್ಯಕ್ಷ ಅಮ್ಮು ನಡ್ಯೋಡಿ ಅವರ ಮನೆ ಗೆ ಶಾಸಕ ರಾಜೇಶ್ ನಾಯ್ಕ್ ಹಾಗೂ ಬಂಟ್ವಾಳ ‌ಬಿಜೆಪಿ ಮಂಡಲದ ಸಮಿತಿ ಮನೆಗೆ ಬೇಟಿ ನೀಡಿ ನಾಮಫಲಕ ಅನಾವರಣ ಮಾಡಿ, ಶಾಲು ಹೊದಿಸಿ ಗೌರವ ಸಲ್ಲಿಸಿದರು.

ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಾತನಾಡಿ ಬೂತ್ ಅಧ್ಯಕ್ಷರ ಹಾಗೂ ಕಾರ್ಯಕರ್ತರ ಜೊತೆ ಶಾಸಕ, ರಾಜ್ಯ , ರಾಷ್ಟ್ರದ ಬಿಜೆಪಿ ಸಮಿತಿ ತಂಡ ಜೊತೆಯಾಗಿ ಇದೆ, ಪಕ್ಷ ಸಂಘಟನೆಯ ಜೊತೆ ಕಾರ್ಯಕರ್ತರ ಪ್ರತಿ ವಿಚಾರದಲ್ಲಿಯೂ ವಿಶೇಷ ಕಾಳಜಿಯನ್ನು ವಹಿಸಿ ಗೌರವ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ವನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತ್ರತ್ವದಲ್ಲಿ ನಡೆಯುತ್ತಿದೆ. ಹಾಗಾಗಿ ಯಾವುದೇ ಅಂಜಿಕೆ ಇಲ್ಲದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಅವರು ಕರೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಮಾತನಾಡಿ ಕಾರ್ಯಕರ್ತರ ಮನೋಬಲ ಹೆಚ್ಚಾಗಬೇಕು,
ರಾಷ್ಟ್ರೀಯ ವಿಚಾರಗಳು ಪ್ರತಿ ಮನೆಗೂ ತಲುಪಬೇಕು,ಎಂಬ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಆಗಬೇಕಾಗಿದೆ.ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೇಸ್ ಒಡೆದು ಆಳುವ ನೀತಿಯ ಆಡಳಿತ ಮೂಲಕ ಅಶಾಂತಿ ಹಬ್ಬಿತ್ತು. ನಾಮಫಲಕ ಅನಾವರಣ ಕಾರ್ಯಕ್ರಮಕ್ಕೆ ಕಾರ್ಯಕರ್ತರ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದರು.

ಪ್ರಭಾಕರ ಪ್ರಭು ಮಾತನಾಡಿ, ರಾಷ್ಟ್ರದ ಸುಭೀಕ್ಷೆಗಾಗಿ ಹಿರಿಯ ನಾಯಕರ ಕನಸಿನ ಫಲವಾಗಿ ಬಿಜೆಪಿ ಪಕ್ಷ ಉದಯವಾಗಿದೆ. ಇದರ ಗಂಭೀರತೆಯನ್ನು ಅರಿತುಕೊಂಡು ಸಂಘಟನೆಯನ್ನು ಬಲಪಡಿಸಬೇಕು ಎಂದರು.

ಬಂಟ್ವಾಳ ತಾಲೂಕಿನ ಜನತೆ ನೀಡಿದ ಮತಕ್ಕೆ ಕುಂದು ಬಾರದ ರೀತಿಯಲ್ಲಿ ರಾಜಧರ್ಮದ ಆಡಳಿತವನ್ನು ಶಾಸಕರು ನಡೆಸುತ್ತಿದ್ದಾರೆ.ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಕಾರ್ಕಳ ,ಮಾತನಾಡಿ ಬೂತ್ ಬಿಜೆಪಿ ಪಕ್ಷದ ಜೀವಾಳ ಎಂದರು.

ಈ ಸಂದರ್ಭದಲ್ಲಿ ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ಸುಜಾತ ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಸದಸ್ಯ ರಾದ ಲಿಂಗಪ್ಪ ಪೂಜಾರಿ, ಚಂದ್ರ ಕೋರ್ಯಾರ್ , ಬೇಬಿ ಪೂಜಾರಿ, ಪೂರ್ಣಿಮಾ ಪೂಜಾರಿ, ಶೇಖರ್ ಶೆಟ್ಟಿ ಬದ್ಯಾರ್, ಪ್ರತಿಭಾ ಶೆಟ್ಟಿ, ಗೀತಾಗೋಪಾಲ‌ನಾಯ್ಕ್, ಶೋಭಾ,ಪುಷ್ಪಾ, ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಕಾರ್ಯದರ್ಶಿ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಕಾವಳಪಡೂರು ಗ್ರಾಮದ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು, ಪ್ರಮುಖರಾದ ಹರೀಶ್ ಪೂಜಾರಿ, ದಿನೇಶ್ ಶೆಟ್ಟಿ ವ,ಉಮೇಶ್ ಗೌಡ, ಡಾಕಯ್ಯ ಗೌಡ, ನಿತಿನ್ ಕುಲಾಲ್, ಪ್ರಭಾತ್ ನಾಯಕ್, ಮಹಾಬಲ ಶೆಟ್ಟಿ, ರತ್ನಾಕುಮಾರ್ ಚೌಟ, ರಘರಾಮ ಶೆಟ್ಟಿ, ರಾಜೇಶ್ ಶೆಟ್ಟಿ ಕೊನೆರೊಟ್ಟು, ಸೀತಾನಂದ ಶೆಟ್ಟಿ ಅಡಮೊಗರು, ಸದಾನಂದ ಶೆಟ್ಟಿ, ಸುಂದರ ಶೆಟ್ಟಿ ಕರೆಂಕಿಲ, ಸಂಜೀವ ಶೆಟ್ಟಿ, ಪ್ರಶಾಂತ್ ಪೂಜಾರಿ, ಗಣೇಶ್ ರೈ ಮಾಣಿ ಮತ್ತಿತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!