Friday, August 28, 2026
Homeತಾಜಾ ಸುದ್ದಿದರ್ಶನ್ ಕೇಸ್ ನ ತನಿಖಾಧಿಕಾರಿ ಎಸಿಪಿ ಚಂದನ್ ಗೆ ಬೆದರಿಕೆ ಹಾಕಿದ ಪ್ರಕರಣ; ಮಾಜಿ ಸಂಸದ...

ದರ್ಶನ್ ಕೇಸ್ ನ ತನಿಖಾಧಿಕಾರಿ ಎಸಿಪಿ ಚಂದನ್ ಗೆ ಬೆದರಿಕೆ ಹಾಕಿದ ಪ್ರಕರಣ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ ಐ ಆರ್ ದಾಖಲು

- Advertisement -
- Advertisement -

ಬೆಂಗಳೂರು : ದರ್ಶನ್ ಕೇಸ್ ನ ತನಿಖಾಧಿಕಾರಿ ಎಸಿಪಿ ಚಂದನ್ ಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಮಾಜಿ ಸಂಸದ ಪ್ರತಾಪ್ ಸಿಂಹ ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಅರೆಸ್ಟ್ ಆದ ವಿಚಾರಕ್ಕೆ ಸಂಬಂಧಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ಪೋಸ್ಟ್ ಒಂದನ್ನು ಹಾಕಿ ಎಸಿಪಿ ಚಂದನ್ ಅವರಿಗೆ ವಾರ್ನಿಂಗ್ ಕೊಟ್ಟಿದ್ದರು. ಸಹೋದರ ಪುನೀತ್ ಕೆರೆಹಳ್ಳಿ ಬಿಡುಗಡೆ ಆಗಿದ್ದಾನೆ. ಆತನನ್ನು ಠಾಣೆಯಲ್ಲಿ ಬೆತ್ತಲುಗೊಳಿಸಿ ಹಿಂಸೆ ಕೊಟ್ಟಿರುವ ACP ಚಂದನ್ ನಾಳೆ ಸ್ಟೇಷನ್ ಗೆ ಬರ್ತೀನಿ, ನೀವು ಇರಬೇಕು ಎಂದು ಪೋಸ್ಟ್ ಹಾಕಿದ್ರು.ಈ ಹಿನ್ನೆಲೆ ಪ್ರತಾಪ್ ಸಿಂಹ ವಿರುದ್ಧ ಎಸಿಪಿ ಚಂದನ್ ಕುಮಾರ್ ದೂರು ದಾಖಲಿಸಿದ್ದಾರೆ.

ಯಾವುದೇ ದಾಖಲೆ ಇಲ್ಲದಿದ್ರೂ ರಾಜಕೀಯ ಉದ್ದೇಶದಿಂದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!