Thursday, June 4, 2026
Homeಕರಾವಳಿಮಳೆಗಾಲದಲ್ಲಿ ಅಪಾಯಕಾರಿ ಜಾಗದಲ್ಲಿ ರೀಲ್ಸ್ ಮಾಡಿದ್ರೆ ಬೀಳುತ್ತೆ ಕೇಸ್ ; ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ವಾರ್ನಿಂಗ್

ಮಳೆಗಾಲದಲ್ಲಿ ಅಪಾಯಕಾರಿ ಜಾಗದಲ್ಲಿ ರೀಲ್ಸ್ ಮಾಡಿದ್ರೆ ಬೀಳುತ್ತೆ ಕೇಸ್ ; ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ವಾರ್ನಿಂಗ್

- Advertisement -
- Advertisement -

ಮಂಗಳೂರು; ಮಳೆಗಾಲದಲ್ಲಿ ಅಪಾಯಕಾರಿ ಜಾಗದಲ್ಲಿ ರೀಲ್ಸ್ ಮಾಡಿದವರ ಮೇಲೆ ಕೇಸ್  ಬೀಳುತ್ತೆ ಅಂತಾ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಪ್ರವಾಸಿ ತಾಣ, ಬೀಚ್ ಗಳಲ್ಲಿ ಅಪಾಯಕಾರಿ ಬೋರ್ಡ್ ಹಾಕಲಾಗಿದೆ. ಬೋರ್ಡ್ ಜೊತೆ ಕೆಲವು ಕಾನೂನುಗಳು ಅನ್ವಯವಾಗುತ್ತದೆ. ಇಂತಹ ಬೋರ್ಡ್ ಇರುವ ಪ್ರದೇಶಗಳಲ್ಲಿ ಕಾನೂನು ಮೀರಿ ರೀಲ್ಸ್ ಮಾಡಿದರೆ ಅವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಡಿನ ಮಧ್ಯೆ ಹಾಗು ಇತರ ಅಪಾಯಕಾರಿ ಪ್ರದೇಶಗಳಲ್ಲಿ ವಿಡಿಯೋ ಮಾಡುವುದು ಅಪಾಯಕಾರಿ ಆಗಿದ್ದು, ಪ್ರಕೃತಿ ಯಾವಾಗ ಯಾವ ರೀತಿ ವರ್ತಿಸುತ್ತದೆ ಎನ್ನುವುದನ್ನು ಊಹಿಸಲು ಆಗುವುದಿಲ್ಲ, ಪ್ರಾಕೃತಿಕ ವಿಕೋಪ ಯಾವಾಗ,ಹೇಗೆ ನಡೆಯುತ್ತೆ ಅನ್ನೋದನ್ನು ಹೇಳೋಕಾಗಲ್ಲ ಈ ಹಿನ್ನಲೆ ನಾನು ಮಾಧ್ಯಮಗಳ ಮೂಲಕ ಈ ರೀತಿಯ ಸಾಹಸಕ್ಕೆ ಯಾವಾತ್ತೂ ಮುಂದಾಗಬೇಡಿ ಎಂದು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!