Thursday, June 4, 2026
Homeಕರಾವಳಿಮಂಗಳೂರು: ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನ‌ ಕೊಲೆ ಯತ್ನ, ನಾಲ್ಕು ಜನ ಪೊಲೀಸ್ ವಶಕ್ಕೆ

ಮಂಗಳೂರು: ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನ‌ ಕೊಲೆ ಯತ್ನ, ನಾಲ್ಕು ಜನ ಪೊಲೀಸ್ ವಶಕ್ಕೆ

- Advertisement -
- Advertisement -

ಮಂಗಳೂರು : ನಗರದ ಹೊರ ವಲಯದ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮತ್ತು ಉಳಾಯಿಬೆಟ್ಟು ನಿವಾಸಿಯಾಗಿರುವ ಯೂಸೂಫ್ ಆ.12 ರ ರಾತ್ರಿ ಕುಲಶೇಖರ ಬಳಿ ತನ್ನ ಕಾರಿನಲ್ಲಿ ಮನೆಗೆ ತೆರಳುತ್ತಿರುವ ವೇಳೆ ಬೈಕ್ ಡಿಕ್ಕಿ ಹೊಡೆಸಿ ಯೂಸೂಫ್ ಕಾರಿನಿಂದ ಇಳಿದ ಬಳಿಕ ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿ ಬಳಿಕ ಕಾರಿನ ಗಾಜು ಪುಡಿಗೈದು ಸ್ಥಳದಿಂದ ಪರಾರಿಯಾಗಿದ್ದರು.

ಯೂಸೂಫ್


ಈ ಪ್ರಕರಣ ಸಂಬಂಧ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೃತ್ಯ ಎಸಗಿದ‌ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳಾದ ಪೆರ್ಮಂಕಿ ಉಳಾಯಿಬೆಟ್ಟಿನ‌ ನಿವಾಸಿ ಸಂದೇಶ್ ಪೂಜಾರಿ(26) , ಬಂಟ್ವಾಳದ ರಾಯಿ ನಿವಾಸಿ ದೇವದಾಸ್ ಶೆಟ್ಟಿ(26) , ಪಾಂಡವರಗುಡ್ಡೆ ನಿವಾಸಿ ಸುರಾಜ್(29) , ಫರಂಗಿಪೇಟೆಯ ಧನರಾಜ್(26) ಮುಂತಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯೂಸುಫ್ ಹಿಂದೆ ಉಳಾಯಿಬೆಟ್ಟಿನಲ್ಲಿ ನಡೆದ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಅದಕ್ಕೆ ರಿವೆಂಜ್ ನೀಡಲು ಆರೋಪಿಗಳು ಕೊಲೆ ಮಾಡಲು ಯತ್ನಿಸಿದ್ದರು ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

- Advertisement -

Latest News

error: Content is protected !!