Tuesday, May 21, 2024
Homeತಾಜಾ ಸುದ್ದಿಗೆಳೆಯನನ್ನು ಸಾಯಿಸಲು ಯತ್ನಿಸಿದವನಿಗೆ 10 ವರ್ಷದ ಬಳಿಕ ಬಿಗ್ ಶಾಕ್.. ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಗೆಳೆಯನನ್ನು ಸಾಯಿಸಲು ಯತ್ನಿಸಿದವನಿಗೆ 10 ವರ್ಷದ ಬಳಿಕ ಬಿಗ್ ಶಾಕ್.. ಅಷ್ಟಕ್ಕೂ ಆಗಿದ್ದೇನು ಗೊತ್ತಾ?

spot_img
- Advertisement -
- Advertisement -

ಬೆಂಗಳೂರು: ಈ ಸ್ಟೋರಿಯನ್ನು ಓದಿದ್ರೆ ನಿಮಗೆ ನಿಜಕ್ಕೂ ಹೀಗೆಲ್ಲಾ ನಡೆಯುತ್ತಾ ಅನ್ನೋ ಅನುಮಾನ ಮೂಡುತ್ತೆ. ಆದರೆ ಇದು ನಿಜವಾಗಿ ನಮ್ಮ ರಾಜ್ಯದಲ್ಲೇ ನಡೆದ ಘಟನೆಯ

ಬೆಂಗಳೂರಿನ ಕೆ ಆರ್ ಪುರಂನಲ್ಲಿ  ಮೂವರು ಎಂಜಿನಿಯರ್ ಗೆಳೆಯರು 10 ವರ್ಷದ ಹಿಂದೆ ಒಟ್ಟಿಗೆ ವಾಸವಿದ್ದರು. ಆದ್ರೇ ವೈಮನಸ್ಸು ಉಂಟಾಗಿ ಸ್ನೇಹಿತನೊಬ್ಬನನ್ನು ಕೊಲೆ ಮಾಡುವ ಹಂತಕ್ಕೆ ತಲುಪಿತ್ತು. ಮಹಡಿಯಿಂದ ಕಾಲು ಜಾರಿ ಬಿದ್ದನೆಂದು ಬಿಂಬಿಸುವಂತೆ ಸ್ನೇಹಿತನನ್ನು ಮಹಡಿ ಮೇಲಿನಿಂದ ದೂಡಿ ಕೊಲೆಗೆ ಯತ್ನಿಸಿದ್ದರು. ಅದೃಷ್ಠ ವಶಾತ್ ಮಹಡಿ ಮೇಲಿನಿಂದ ಬಿದ್ದರೂ ಸ್ನೇಹಿತ ಸಾವನ್ನಪ್ಪಿರಲಿಲ್ಲ. ಆದರೆ ಕೋಮಾಗೆ ಹೋಗಿದ್ದ. ಚಿಕಿತ್ಸೆ ಬಳಿಕ, ಕೋಮಾದಿಂದ ಹಂತ ಹಂತವಾಗಿ ಎಚ್ಚರಗೊಂಡು, ಕೊಲೆಗೆ ಯತ್ನಿಸಿದ ಸ್ನೇಹಿತರಿಗೆ ಶಾಕ್ ನೀಡಿದ್ದಾನೆ.

ಯೆಸ್… ಕೆ.ಆರ್.ಪುರಂನ ಮೂರು ಅಂತಸ್ತಿನ ಕಟ್ಟಡದ ಟೆರೇಸ್ ಮೇಲಿನಿಂದ 10ವರ್ಷದ ಹಿಂದೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಬಿದ್ದು ಗಾಯಗೊಂಡಿದ್ದನು. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಕೋಮಾಗೂ ಮರಳಿದ್ದನು. ಆದ್ರೇ ಹತ್ತು ವರ್ಷದ ಬಳಿಕ, ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದನು. ಅಲ್ಲದೇ ಕಳೆದ ಒಂದು ವರ್ಷದ ಹಿಂದೆ ಪ್ರಜ್ಞೆ ಕೂಡ ಬಂದಿತ್ತು. ಇಂತಹ ಸಂದರ್ಭದಲ್ಲಿ ತನಗೆ ಅಂದು ಆಗಿದ್ದೇನು ಎಂಬುದನ್ನು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಹೀಗಾಗಿ ಹತ್ತು ವರ್ಷಗಳ ಬಳಿಕ, ಆತನ ಇಬ್ಬರು ಸಹಪಾಠಿಗಳು, ಈಗ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವವರಿಗೆ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರುವಂತಾಗಿದೆ.

ಸುಮಾರು ಒಂದು ವರ್ಷ ಕೋಮಾದಿಂದ ಹೊರಬಂದ 29 ವರ್ಷದ ಸೌವಿಕ್ ಚಟರ್ಜಿ, ಚೇತರಿಕೆಸಿಕೊಂಡು ಘಟನೆಗಳನ್ನು ನೆನಪಿಸಿಕೊಂಡು ತನಿಖಾಧಿಕಾರಿಗಳ ಮುಂದೆ ನಡೆದ ಘಟನೆಯನ್ನು ತಿಳಿಸಿದ್ದಾನೆ. ಹೀಗಾಗಿ ಆತನ ಸ್ನೇಹಿತರಾದಂತ ಶಶಾಂಕ್ ದಾಸ್ ಹಾಗೂ ಜಿತೇಂದ್ರ ಕುಮಾರ್ ಇದೀಗ 7 ವರ್ಷ ಜೈಲು ಶಿಕ್ಷೆ ಅನುಭವಿಸುವಂತಾಗಿದೆ.

- Advertisement -
spot_img

Latest News

error: Content is protected !!