- Advertisement -
- Advertisement -
ಕಡಬ: ಎಡಮಂಗಲದ ಯುವಕನೊಬ್ಬ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಪ್ರಸನ್ನ ಕುಮಾರ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ
ಎಡಮಂಗಲ ಗ್ರಾಮದ ಪುಚ್ಚದ ದಿ.ಪುಟ್ಟಣ್ಣ ಗೌಡ ಎಂಬವರ ಪುತ್ರರಾಗಿರುವ ಪ್ರಸನ್ನ ಬೆಂಗಳೂರಿನ ಮಾರತಹಳ್ಳಿಯ ಸಂಸ್ಥೆಯೊಂದರಲ್ಲಿ ಎಸಿ ಟೆಕ್ನಿಷಿಯನ್ ಆಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಪಾಳಿನ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ಬೆಳಗ್ಗೆ ಕಂಪನಿಯ ಕೊಠಡಿಯಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು.ತಾಯಿ, ಇಬ್ಬರು ಸಹೋದರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
- Advertisement -