Friday, June 26, 2026
Homeಕರಾವಳಿಉಡುಪಿಕುಂದಾಪುರ: ಆಕಸ್ಮಿಕ ಬೆಂಕಿ, ಹೊತ್ತಿ ಉರಿದ ಅಂಗಡಿ ಸುಟ್ಟು ಭಸ್ಮ, ಒಂದು ಕೋಟಿ ರೂಪಯಿಗೂ ಅಧಿಕ...

ಕುಂದಾಪುರ: ಆಕಸ್ಮಿಕ ಬೆಂಕಿ, ಹೊತ್ತಿ ಉರಿದ ಅಂಗಡಿ ಸುಟ್ಟು ಭಸ್ಮ, ಒಂದು ಕೋಟಿ ರೂಪಯಿಗೂ ಅಧಿಕ ನಷ್ಟ !

- Advertisement -
- Advertisement -

ಕುಂದಾಪುರ: ಆಕಸ್ಮಿಕ ಬೆಂಕಿ ಹೊತ್ತಿ ಉರಿದು ಇಡೀ ಅಂಗಡಿ ಸುಟ್ಟು ಹೋದ ಘಟನೆ ಕುಂದಾಪುರದ ಮುಳ್ಳಿಕಟ್ಟೆ ಸಮೀಪದ ಬೆನಕ ಹಾರ್ಡ್ ವೇರ್ ಅಂಗಡಿಯಲ್ಲಿ ಸಂಭವಿಸಿದೆ.

ಮಾಲೀಕ‌ ಹರೀಶ್ ಜೋಗಿ ಎಂದಿನಂತೆ ಸಂಜೆ 7 ಗಂಟೆ ಸುಮಾರಿಗೆ ಅಂಗಡಿ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು. ಸ್ವಲ್ಪ ಹೊತ್ತಿನ‌ ನಂತರ ಅಂಗಡಿಯೊಳಗಿಂದ ಶಟರ್ ಮೂಲಕ ಹೊಗೆ ಬರುತ್ತಿರುವುದನ್ನು ಸ್ಥಳೀಯರು ನೋಡಿ ಸಂಶಯ ವ್ಯಕ್ತಪಡಿಸಿ ಕೂಡಲೇ ಶಟರ್ ಬಾಗಿಲು ತೆಗೆಯುವಷ್ಟರಲ್ಲಿ ಬೆಂಕಿಯ ತೀವ್ರತೆ ಇಡೀ ಅಂಗಡಿಗೆ ವ್ಯಾಪಿಸಿಕೊಂಡಿತ್ತು.

ಶಾಪ್ ಒಳಗೆ ಪೈಂಟ್, ಟರ್ಪಂಟೈಲ್ ಮೊದಲಾದ ಆಯಿಲ್ ಬೇಸ್ಡ್ ವಸ್ತುಗಳಿದ್ದ ಕಾರಣ ಸಂಪೂರ್ಣ ಬೆಂಕಿ ಹೊತ್ತಿಕೊಂಡಿದ್ದು, ಅಂಗಡಿ ಸುಟ್ಟು ಕರಕಲಾಗಿ ಹೋಗಿದೆ.

ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಯಿತಾದರೂ ಸಿಬ್ಬಂದಿ ಬರುವಷ್ಟರಲ್ಲಿ ಅಂಗಡಿಯೊಳಗಿನ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿದೆ. ಒಂದು ಕೋಟಿಗೂ ಅಧಿಕ‌ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ ಎಂದು ಹೇಳಲಾಗಿದೆ.

ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜಾ ನಾಯ್ಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ‌ ನಡೆಸಿದ್ದಾರೆ.

- Advertisement -

Latest News

error: Content is protected !!