Wednesday, June 24, 2026
Homeಕರಾವಳಿಎಲ್ಲರೂ ಮತಾಂತರ ನಿಷೇಧ ಕಾಯ್ದೆ ಜಾರಿಯನ್ನು ಸ್ವಾಗತಿಸಬೇಕು: ಕೋಟ ಶ್ರೀನಿವಾಸ್ ಪೂಜಾರಿ

ಎಲ್ಲರೂ ಮತಾಂತರ ನಿಷೇಧ ಕಾಯ್ದೆ ಜಾರಿಯನ್ನು ಸ್ವಾಗತಿಸಬೇಕು: ಕೋಟ ಶ್ರೀನಿವಾಸ್ ಪೂಜಾರಿ

- Advertisement -
- Advertisement -

ಮಂಗಳೂರು: ಮತಾಂತರ ನಿಷೇಧ ಕಾಯ್ದೆ ಜಾರಿಯನ್ನು ಎಲ್ಲಾ ಧರ್ಮ ಹಾಗೂ ಎಲ್ಲಾ ಪಕ್ಷದವರು ಹೆಮ್ಮೆಯಿಂದ ಸ್ವಾಗತಿಸಬೇಕು. ಮತಾಂತರದ ಸಮಸ್ಯೆ ಯಾವುದೇ ಒಂದು ವರ್ಗ ಅಥವ ಜಾತಿ, ಧರ್ಮಕ್ಕೆ ಸೀಮಿತವಾಗಿದ್ದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಕುರಿತು ಮಂಗಳೂರಿನ ಕುದ್ರೋಳಿ ಗೋಕರ್ಣಾಥ ಕ್ಷೇತ್ರದಲ್ಲಿ ಮಾತನಾಡಿದ ಅವರು, ‘ ಯಾವುದೇ ಸಣ್ಣ ಸಮುದಾಯಕ್ಕೂ ಅನ್ಯಾಯ ಆಗಬಾರದು. ಜೊತೆಗೆ ವಂಚನೆಯ ಮೂಲಕ ವಿವಾಹ ಆಗುವುದಾಗಿ ಹೇಳಿ ನಂಬಿಸಿ ಮತಾಂತರ ಮಾಡುವುದು ಶಾಸನಕ್ಕೂ ವಿರೋಧ, ಸಾಮಾಜಿಕ ನ್ಯಾಯಕ್ಕೂ ವಿರೋಧ ಹಾಗೂ ಎಲ್ಲಾ ಧರ್ಮಕ್ಕೂ ವಿರೋಧ ಎಂದರು

- Advertisement -

Latest News

error: Content is protected !!