Friday, June 5, 2026
Homeಕರಾವಳಿದ್ವಿಚಕ್ರ ವಾಹನ ಮತ್ತು ಟಿಪ್ಪರ್ ನಡುವೆ ಅಪಘಾತ; ಶಾಲಾ ಶಿಕ್ಷಕಿ ಸಾವು

ದ್ವಿಚಕ್ರ ವಾಹನ ಮತ್ತು ಟಿಪ್ಪರ್ ನಡುವೆ ಅಪಘಾತ; ಶಾಲಾ ಶಿಕ್ಷಕಿ ಸಾವು

- Advertisement -
- Advertisement -

ಪುತ್ತೂರು: ಮುರ ಸಮೀಪದ ಪೋಳ್ಯದಲ್ಲಿ ದ್ವಿಚಕ್ರ ವಾಹನ ಮತ್ತು ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ನೇರಳಕಟ್ಟೆಯ ಶಾಲಾ ಶಿಕ್ಷಕಿಯೋರ್ವರು ಮೃತಪಟ್ಟಿದ್ದಾರೆ.

ಮೃತಪಟ್ಟ ಶಿಕ್ಷಕಿಯನ್ನು ನೇರಳಕಟ್ಟೆ ಶಾಲೆಯ ಅನಿತಾ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಶಿಕ್ಷಕಿ ಅನಿತಾ ಅವರು ದ್ವಿಚಕ್ರ ವಾಹನದಲ್ಲಿ ತನ್ನ ಮಗುವಿನೊಂದಿಗೆ ಸಂಚರಿಸುತ್ತಿದ್ದ ವೇಳೆ, ಟಿಪ್ಪರ್ ಅಡಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮಗುವಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ತರಲಾಗಿದೆ.

ಸ್ಥಳಕ್ಕೆ ಪುತ್ತೂರು ನಗರ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!