Saturday, June 6, 2026
Homeಕರಾವಳಿಎರಡು ಬೈಕ್‌ಗಳ ನಡುವೆ ಅಪಘಾತ; ಓರ್ವ ಮೃತ್ಯು, ಇಬ್ಬರಿಗೆ ಗಾಯ

ಎರಡು ಬೈಕ್‌ಗಳ ನಡುವೆ ಅಪಘಾತ; ಓರ್ವ ಮೃತ್ಯು, ಇಬ್ಬರಿಗೆ ಗಾಯ

- Advertisement -
- Advertisement -

ಉಡುಪಿ: ಕಾಪುವಿನ ಉಳಿಯಾರಗೋಳಿ ಕೋತಲಕಟ್ಟೆಯಲ್ಲಿ ಎರಡು ಬೈಕ್ ಗಳು ಮುಖಾ ಮುಖಿ ಢಿಕ್ಕಿ ಹೊಡೆದ ಪರಿಣಾಮವಾಗಿ ಓರ್ವ ಮೃತಪಟ್ಟು, ಇಬ್ಬರು ಸವಾರರು ಗಾಯಗೊಂಡ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿ ಪಾಂಗಾಳ ದುರ್ಗಾ ವೆಲ್ ರಿಂಗ್ ವರ್ಕ್ಸ್ ಕಾರ್ಮಿಕ ಮಲ್ಲೇಶ್ (53) ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗೊಂಡ ಬೈಕ್ ಸವಾರ ಜಯನ್‌ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಪಲ್ಸರ್ ಬೈಕ್ ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದು, ಉಳಿಯಾರಗೋಳಿ ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಹೋಂಡಾ ಬೈಕ್ ಪರಸ್ಪರ ಢಿಕ್ಕಿ ಹೊಡೆದುಕೊಂಡಿದೆ. ಅಪಘಾತದ ರಭಸಕ್ಕೆ ಸಹ ಸವಾರನಾಗಿದ್ದ ಮಲ್ಲೇಶ್‌ ರಸ್ತೆಗೆ ಎಸೆಯಲ್ಪಟ್ಟಿದ್ದು ತಲೆಗೆ ತೀವ್ರ ಗಾಯಗಳುಂಟಾಗಿತ್ತು. ಸವಾರ ಜಯನ್‌ ಕಾಲು ಮುರಿತಕ್ಕೊಳಗಾಗಿದ್ದು ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಲ್ಲೇಶ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪಲ್ಸರ್ ಬೈಕ್ ಸವಾರ ಶ್ರೀನಿವಾಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ಕುರಿತು ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!