Thursday, October 29, 2026
Homeಕರಾವಳಿಮಂಗಳೂರುಮುಂಬೈ: ವಿನಯ ಪಿ. ಶೆಟ್ಟಿ ನಿಧನ

ಮುಂಬೈ: ವಿನಯ ಪಿ. ಶೆಟ್ಟಿ ನಿಧನ

- Advertisement -
- Advertisement -

ಮುಂಬೈ: ಡೊಂಬಿವಲಿ ನಿವಾಸಿ ಶ್ರೀಮತಿ ವಿನಯ ಪಿ. ಶೆಟ್ಟಿ (52) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಅಕ್ಟೋಬರ್ 29) ನಿಧನರಾದರು.

ಸರಳ, ಸಜ್ಜನ ಹಾಗೂ ಸ್ನೇಹಪರ ಸ್ವಭಾವದವರಾಗಿದ್ದ ವಿನಯ ಅವರು ಹಲವು ವರ್ಷಗಳ ಕಾಲ ಡೊಂಬಿವಲಿಯ ಸೇಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಬಳಿಕ ಸ್ವಯಂ ನಿವೃತ್ತಿ ಪಡೆದಿದ್ದರು.

ಮಂಗಳೂರಿನ ಬಜಪೆ ಮೂಲದವರಾದ ಮೃತರು, ಪತಿ ಲುಬ್ರಿಜೋಲ್ ಕಂಪನಿಯ ಹಿರಿಯ ಅಧಿಕಾರಿ ಹಾರಾಡಿ ಪ್ರದೀಪ್ ಶೆಟ್ಟಿ ಹಾಗೂ ಪುತ್ರಿ, ಮುಂಬೈ ಕ್ರಿಕೆಟ್ ಕ್ಲಬ್‌ನ ಆಟಗಾರ್ತಿಯಾಗಿರುವ ಟ್ವಿಷ ಶೆಟ್ಟಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.ಅವರ ನಿಧನಕ್ಕೆ ಬಂಧುಗಳು, ಸ್ನೇಹಿತರು ಹಾಗೂ ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.

- Advertisement -

Latest News

error: Content is protected !!