ಉಡುಪಿ: ಕೆಲವು ದಿನದ ಹಿಂದೆ ಮೀನು ಟ್ರಕ್ ಚಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಅಪಹರಣಗೊಂಡ ಚಾಲಕನನ್ನು ಪತ್ತೆಹಚ್ಚಿ ತಿರುವನಂತಪುರಂನಿಂದ ವಾಪಸ್ ಕರೆತಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಸುಲೈಮಾನ್ ಮಲ್ಪೆಯಲ್ಲಿ ಮೀನು ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.ಸೆಪ್ಟೆಂಬರ್ 30 ರಂದು ಅವರು ಕೊಪ್ಪದಲ್ಲಿರುವ ಮನೆಯಿಂದ ಮಲ್ಪೆಗೆ ತೆರಳಿದ್ದರು. ಸುಲೈಮಾನ್, ಚಾಲಕನಾಗಿ ಕೆಲಸ ಮಾಡುವುದರ ಜೊತೆಗೆ, ಮಲ್ಪೆಯಲ್ಲಿ ಮೀನುಗಳನ್ನು ಸಂಗ್ರಹಿಸಿ ಅದನ್ನು ಕೇರಳದಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದ ಎಂದು ಹೇಳಲಾಗಿದೆ.
ಕೆಲವು ಪಾಲುದಾರಿಕೆ ವ್ಯವಹಾರಗಳಿಗೆ ಸಂಬಂಧಿಸಿದಂತೆ, ಸುಲೈಮಾನ್ ಹಣವನ್ನು ಪಾವತಿಸಬೇಕಾಗಿತ್ತು. ಸುಲೈಮಾನ್ 15 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಿತ್ತು ಮತ್ತು ಪಾವತಿಸದ ಕಾರಣ ಅವರನ್ನು ಅಪಹರಿಸಲಾಗಿದೆ ಎಂದು ತಿಳಿದು ಬಂದಿದೆ .ಅಪಹರಣಕಾರರು ಆತನನ್ನು ಕೊಲೆ ಮಾಡಿ ಶವವನ್ನು ಸಮುದ್ರಕ್ಕೆ ಎಸೆಯುವ ಬೆದರಿಕೆ ಹಾಕಿದ್ದರು.
ಅಪಹರಣಕಾರರನ್ನು ಕೇರಳದ ಹನಸ್ ಮತ್ತು ಆತನ ಸಹೋದರರು ಎಂದು ಗುರುತಿಸಲಾಗಿದೆ. ಈಗ ಸುಲೈಮಾನ್ ಪತ್ತೆಯಾಗಿದ್ದು ವಾಪಸ್ ಕರೆತರಲಾಗಿದೆ.ಅಪಹರಣಕಾರರು ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


