Sunday, April 28, 2024
Homeತಾಜಾ ಸುದ್ದಿಯೂಟ್ಯೂಬ್ ವೀಕ್ಷಕರ ಪ್ರಮಾಣ ಕುಸಿಯಿತೆಂದು ಆತ್ಮಹತ್ಯೆ ಮಾಡಿಕೊಂಡ ಯುವಕ!

ಯೂಟ್ಯೂಬ್ ವೀಕ್ಷಕರ ಪ್ರಮಾಣ ಕುಸಿಯಿತೆಂದು ಆತ್ಮಹತ್ಯೆ ಮಾಡಿಕೊಂಡ ಯುವಕ!

spot_img
- Advertisement -
- Advertisement -

ಹೈದರಾಬಾದ್: ಯೂಟ್ಯೂಬ್‌ನಲ್ಲಿ ತನ್ನ ಚಾನೆಲ್‌ಗೆ ವೀಕ್ಷಕರು ಕಡಿಮೆಯಾದರು ಎಂಬ ಒಂದೇ ಕಾರಣಕ್ಕೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದ್ದು, 23 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಯೂಟ್ಯೂಬ್‌ ಚಾನೆಲ್‌ಗೆ ವೀಕ್ಷಕರು ಕಡಿಮೆಯಾದರು ಎಂಬ ಒಂದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೈದರಾಬಾದ್ ಐಐಟಿಎಂ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಗ್ವಾಲಿಯರ್‌ ಮೂಲದ ವಿದ್ಯಾರ್ಥಿ ಇಂದು ಬೆಳಿಗ್ಗೆ ವಸತಿ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿ ಬಿದ್ದ ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ರವಾನಿಸಲು ಪ್ರಯತ್ನಿಸಿದರೂ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಯು ಬರೆದಿರುವ ಸೂಸೈಡ್ ನೋಟ್‌ನಲ್ಲಿ, ಯೂಟ್ಯೂಬ್‌ನಲ್ಲಿ ತನ್ನ ಚಾನೆಲ್‌ಗೆ ವೀಕ್ಷಕರು ಕಡಿಮೆಯಾಗಿದ್ದಾರೆ ಮತ್ತು ಪೋಷಕರು ತನ್ನ ವೃತ್ತಿಜೀವನದಲ್ಲಿ ತನಗೆ ಮಾರ್ಗದರ್ಶನ ನೀಡುತ್ತಿಲ್ಲ, ಎಂದು ಮೃತ ವಿದ್ಯಾರ್ಥಿ ನೋವು ತೋಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿ ವ್ಯಾಸಂಗ ಮಾಡುತ್ತಿದ್ದ. ಪ್ರಸ್ತುತ ತಮ್ಮ ಕೋರ್ಸ್‌ಗಾಗಿ ಆನ್‌ಲೈನ್ ತರಗತಿಗಳ ಮೂಲಕ ಅಧ್ಯಯನ ಮಾಡುತ್ತಿದ್ದ. ವಿದ್ಯಾರ್ಥಿಯು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ-ಗೇಮ್‌ಗಳ ವಿಷಯವನ್ನು ಅಪ್‌ಲೋಡ್ ಮಾಡುತ್ತಿದ್ದ. ಪ್ರಸ್ತುತ ಆತ್ಮಹತ್ಯೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!