Wednesday, June 24, 2026
Homeಉತ್ತರ ಕನ್ನಡಮದುವೆಯಾಗಲು ಹೆಣ್ಣು ಸಿಗದ್ದಕ್ಕೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮದುವೆಯಾಗಲು ಹೆಣ್ಣು ಸಿಗದ್ದಕ್ಕೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ಉತ್ತರಕನ್ನಡ: ಮದುವೆಯಾಗಲು ಹೆಣ್ಣು ಸಿಗದ್ದಕ್ಕೆ ಯುವಕನೊಬ್ಬ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತೇಲಂಗಾರ ಗ್ರಾಮದಲ್ಲಿ ನಡೆದಿದೆ.ತೇಲಂಗಾರದ ಕಿರಗಾರಿಮನೆಯ ನಿವಾಸಿ ನಾಗರಾಜ ಗಣಪತಿ (35) ಆತ್ಮಹತ್ಯೆಗೆ ಶರಣಾದವರು.

ಗಣಪತಿ ಮನೆಯ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಗಣಪತಿ ಕೃಷಿ ಕೆಲಸ ಮಾಡಿಕೊಂಡಿದ್ದು, ಮದುವೆಯಾಗಲು ಕನ್ಯೆ ಸಿಗಲಿಲ್ಲ  ಎಂದು ಮನನೊಂದು ಸಾವಿಗೆ ಶರಣಾಗಿದ್ದಾರೆ.ಘಟನಾ ಸ್ಥಳಕ್ಕೆ ಯಲ್ಲಾಪುರ ಠಾಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!