Sunday, June 7, 2026
Homeತಾಜಾ ಸುದ್ದಿಪಡುಬಿದ್ರೆ: ಕಡಲಿಗೆ ಈಜಲು ಹೋದ ಯುವಕ ನಾಪತ್ತೆ- ಮೃತ ದೇಹ ಪತ್ತೆ

ಪಡುಬಿದ್ರೆ: ಕಡಲಿಗೆ ಈಜಲು ಹೋದ ಯುವಕ ನಾಪತ್ತೆ- ಮೃತ ದೇಹ ಪತ್ತೆ

- Advertisement -
- Advertisement -

ಪಡುಬಿದ್ರೆ: ತನ್ನಿಬ್ಬರು ಗೆಳೆಯರೊಂದಿಗೆ ಕಡಲಿಗೆ ಈಜಲು ಹೋಗಿ ಫೆ. 19ರಂದು ನಾಪತ್ತೆಯಾಗಿದ್ದ ಪಡುಬಿದ್ರಿ ನಡಾಲು ಅಡಿಪುತೋಟ ನಿವಾಸಿ ರಘುರಾಮ ದೇವಾಡಿಗ ಅವರ ಪುತ್ರ ಧನುಷ್ (19) ಅವರ ಮೃತದೇಹ ಪಡುಬಿದ್ರಿ ಕಾಡಿಪಟ್ಲ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.

ಆತನೊಂದಿಗೆ ಈಜಲು ಹೋಗಿದ್ದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದರು. ಧನುಷ್ ತಂದೆ ತಾಯಿ ಹಾಗೂ ಕಿರಿಯ ಸಹೋದರನನ್ನು ಅಗಲಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹ ಬಿಟ್ಟುಕೊಡಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!