Thursday, June 4, 2026
Homeಕರಾವಳಿಮಂಗಳೂರು: 19 ವರ್ಷದ ಯುವಕ ನೇಣಿಗೆ ಶರಣು, ಪ್ರೇಮ ವೈಫಲ್ಯ ಶಂಕೆ

ಮಂಗಳೂರು: 19 ವರ್ಷದ ಯುವಕ ನೇಣಿಗೆ ಶರಣು, ಪ್ರೇಮ ವೈಫಲ್ಯ ಶಂಕೆ

- Advertisement -
- Advertisement -

ಮಂಗಳೂರು: ಇಲ್ಲಿನ ಉಳ್ಳಾಲದ ಕುತ್ತಾರ್ ಸಂತೋಷನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಯುವಕನೊಬ್ಬ ಮಾರ್ಚ್ 15ರ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುದ್ಕೋರಿಗುಡ್ಡೆಯ ದೀಕ್ಷಿತ್ (19) ಆತ್ಮಹತ್ಯೆ ಮಾಡಿಕೊಂಡ ಯುವಕ.

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಾಗ ದೀಕ್ಷಿತ್ ಮನೆಯಲ್ಲಿ ಒಬ್ಬರೇ ಇದ್ದರು. ಇವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಈ ಸಾವಿನ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೇಮ ವೈಫಲ್ಯದಿಂದ ಆತ ತನ್ನ ಜೀವನವನ್ನು ಅಂತ್ಯಗೊಳಿಸಿರುವ ಕುರಿತು ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ರಾತ್ರಿ ದೀಕ್ಷಿತ್ ತನ್ನ ಬಾಡಿಗೆ ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ದೀಕ್ಷಿತ್ ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!