Tuesday, April 30, 2024
Homeತಾಜಾ ಸುದ್ದಿಲಾರಿ ಮತ್ತು ಟೂರ್ ಟ್ರಾವೆಲ್ಸ್‌ ನಡುವೆ ಭೀಕರ ಅಪಘಾತ: ಅಯೋಧ್ಯೆ ಪ್ರವಾಸಕ್ಕೆ ಹೋಗಿದ್ದ ರಾಜ್ಯದ 7...

ಲಾರಿ ಮತ್ತು ಟೂರ್ ಟ್ರಾವೆಲ್ಸ್‌ ನಡುವೆ ಭೀಕರ ಅಪಘಾತ: ಅಯೋಧ್ಯೆ ಪ್ರವಾಸಕ್ಕೆ ಹೋಗಿದ್ದ ರಾಜ್ಯದ 7 ಮಂದಿ ದುರ್ಮರಣ

spot_img
- Advertisement -
- Advertisement -

ಉತ್ತರ ಪ್ರದೇಶ: ಲಾರಿ ಮತ್ತು ಟೂರ್ ಟ್ರಾವೆಲ್ಸ್‌ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೀದರ್ ಮೂಲದ ಒಂದೇ ಕುಟುಂಬದ ಏಳು ಜನ ದುರ್ಮರಣಕ್ಕೀಡಾಗಿದ್ದಾರೆ. ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯ ನೌನಿಹಾ ಮಂಡಿ ಬಳಿ ಲಾರಿ ಮತ್ತು ಟೂರ್ ಟ್ರಾವೆಲರ್ ಮಧ್ಯ ಮುಖಾಮುಖಿ ಅಪಘಾತವಾಗಿದೆ.  ಒಂದೇ ಕುಟುಂಬದ 7 ಜನ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ. 6 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನ ಬಹರಾಯಿಚ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಹರಾಯಿಚ್ ಜಿಲ್ಲಾಧಿಕಾರಿ ಮತ್ತು ಎಸ್ಪಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರಿಗೆ ಸರಿಯಾಗಿ ಚಿಕಿತ್ಸೆ ನೀಡಬೇಕೆಂದು ವೈದ್ಯರಿಗೆ ಸೂಚಿಸಿದ್ದಾರೆ. ಘಟನಾ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಕಳೆದ ಕೆಲ ದಿನಗಳ ಹಿಂದೆ ಬೀದರ್ ನಗರದ ಗುಂಪಾ ಬಡಾವಣೆಯ 16 ಜನ ಉತ್ತರ ಪ್ರದೇಶದ ಆಯೋಧ್ಯ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳ ತೀರ್ಥ ಯಾತ್ರೆಗೆ ಟ್ರಾವೆಲರ್ ನಲ್ಲಿ ಹೋಗಿದ್ದರು. ಲಖ್ಮೀರ್ ಖೇರಿಯಿಂದ ಅಯೋಧ್ಯಾಗೆ ಕಡೆಗೆ ಪ್ರವಾಸ ಬೆಳಿಸಿದ್ದರು ಈ ವೇಳೆ ಮೋತಿಪುರ ಬಳಿಯ ಖೇರಿ- ನಾಗಪುರ ಹೆದ್ದಾರಿಯಲ್ಲಿ ಬೆಳಿಗ್ಗೆ 6 ಸುಮಾರಿಗೆ ಲಾರಿ ಮತ್ತು ಟ್ರಾವೆಲರ್ ಮಧ್ಯ ಭೀಕರ ಅಪಘಾತ ಸಂಭವಿಸಿದೆ.

ದುರ್ಘಟನೆಯಲ್ಲಿ ಬೀದರ್ ಶಿವಕುಮಾರ್ (೨೮), ಜಗದಂಬಾ(೫೨), ಮನ್ಮಥ(೩೬), ಅನಿಲ್(೩೦), ಸಂತೋಷ, ಶಶಿಕಲಾ(೩೮), ಸರಸ್ವತಿ (೪೭) ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ಕುಟುಂಬಸ್ಥರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ  ಸಾಂತ್ವನ ಹೇಳಿದಾರೆ,‌‌.. ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತೇನೆ.. ಅಗಲಿದ ಆತ್ಮಗಳ ಕುಟುಂಬಕ್ಕೆ ನಾನು ಶಾಂತಿಯನ್ನು ಬಯಸುತ್ತೇನೆ ಎಂದು ಸಿಎಂ ಆದಿತ್ಯನಾಥ ಪತ್ರಿಕಾ ಪ್ರಕಟಣೆ ಮೂಲಕ ಸಾಂತ್ವನ ಹೇಳಿದ್ದಾರೆ.

- Advertisement -
spot_img

Latest News

error: Content is protected !!