Friday, August 28, 2026
Homeಕರಾವಳಿಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಾಡಾನೆಗಳಿಂದ ಬಚಾವಾದ ವಾಹನ ಸವಾರರು

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಾಡಾನೆಗಳಿಂದ ಬಚಾವಾದ ವಾಹನ ಸವಾರರು

- Advertisement -
- Advertisement -

ಸಕಲೇಶಪುರ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ‌ ಕಾಡಾನೆಗಳು‌ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ

ಕಾಡಾನೆಗಳ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ವಾಹನ ಸವಾರರು ಪಾರಾಗಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಗುಲಗಳಲೆ ಕ್ರಾಸ್ ನಲ್ಲಿ ಘಟನೆ ನಡೆದಿದ್ದು,
ವಾಹನಗಳು ಸಂಚರಿಸುತ್ತಿದ್ದ ವೇಳೆ ಕಾಡಾನೆಗಳು ಏಕಾಏಕಿ ರಸ್ತೆ ಮಧ್ಯೆ ಬಂದಿವೆ‌.

ಕಾಡಾನೆಗಳ ಕಂಡು ಆತಂಕಕ್ಕೊಳಗಾರ ವಾಹನ ಸವಾರರು ತಕ್ಷಣ ರಿವರ್ಸ್ ತೆಗೆದುಕೊಂಡು ಅಪಾಯದಿಂದ ಪಾರಾಗಿದ್ದಾರೆ.

ರಸ್ತೆಯಲ್ಲಿ ಇನ್ನೋವಾ ಮತ್ತು ಓಮ್ನಿ ಸೇರಿ 5 ಕಾರುಗಳು ಮತ್ತು ಒಂದು ಬೈಕ್ ಸಮೀಪಕ್ಕೆ ಕಾಡಾನೆಗಳು ತಲುಪಿದ್ದು, ಬೆಳಗ್ಗೆಯೇ ಬೆಳಗ್ಗೆಯೇ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ 3 ಕಾಡಾನೆಗಳು ನಿಂತಿದ್ದವು.

- Advertisement -

Latest News

error: Content is protected !!