Wednesday, May 15, 2024
Homeತಾಜಾ ಸುದ್ದಿಸಂಜೆ 7ರ ಬಳಿಕ ಮಹಿಳಾ ಕೆಲಸಗಾರರನ್ನು ದುಡಿಸಿಕೊಳ್ಳುವಂತಿಲ್ಲ: ಉತ್ತರ ಪ್ರದೇಶ ಸರ್ಕಾರದ ಹೊಸ ನಿಯಮ

ಸಂಜೆ 7ರ ಬಳಿಕ ಮಹಿಳಾ ಕೆಲಸಗಾರರನ್ನು ದುಡಿಸಿಕೊಳ್ಳುವಂತಿಲ್ಲ: ಉತ್ತರ ಪ್ರದೇಶ ಸರ್ಕಾರದ ಹೊಸ ನಿಯಮ

spot_img
- Advertisement -
- Advertisement -

ಉತ್ತರ ಪ್ರದೇಶ: ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸಲು ಅನೇಕ ತೀರ್ಮಾನಗಳನ್ನು ತೆಗೆದುಕೊಂಡಿರುವ ಉತ್ತರ ಪ್ರದೇಶ ಸರ್ಕಾರ, ರಾಜ್ಯಾದ್ಯಂತ ಫ್ಯಾಕ್ಟರಿಗಳಲ್ಲಿ ಮಹಿಳಾ ಕೆಲಸಗಾರರನ್ನು ರಾತ್ರಿ ಪಾಳಿಗಳಲ್ಲಿ ದುಡಿಸಿಕೊಳ್ಳುವಂತೆ ಇಲ್ಲ ಎಂದು ಆದೇಶಿಸಿದೆ.

ಸಂಜೆ 7ರ ನಂತರ ಮತ್ತು ಬೆಳಿಗ್ಗೆ 6 ಗಂಟೆಗಿಂತ ಮುನ್ನ ಕಾರ್ಖಾನೆಗಳಲ್ಲಿ ಯಾವುದೇ ಮಹಿಳಾ ನೌಕರರು ಕೆಲಸ ಮಾಡುವಂತೆ ಇಲ್ಲ. ಹಾಗೆ ಮಾಡಬೇಕಿದ್ದರೆ, ಅದಕ್ಕೆ ಅವರ ಲಿಖಿತ ಒಪ್ಪಿಗೆ ಬೇಕು. ಈ ಮೇಲೆ ಉಲ್ಲೇಖಿಸಿದ ಅವಧಿಯ ಬಳಿಕವೂ ಮಹಿಳಾ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರೆ, ಸಂಬಂಧಿತ ಅಧಿಕಾರಿಗಳು ಅವರಿಗೆ ಉಚಿತ ಸಾರಿಗೆ, ಆಹಾರ ಮತ್ತು ಸಾಕಷ್ಟು ಸುರಕ್ಷತೆಯ ಕ್ರಮಗಳನ್ನು ಒದಗಿಸಬೇಕು” ಎಂದು ಸರ್ಕಾರದ ಸುತ್ತೋಲೆ ತಿಳಿಸಿದೆ.

ಆದೇಶದ ಪ್ರಕಾರ, ಮಹಿಳಾ ಉದ್ಯೋಗಿಯು ಬೆಳಿಗ್ಗೆ 6 ಗಂಟೆಗಿಂತ ಮುಂಚೆ ಮತ್ತು ಸಂಜೆ 7ರ ನಂತರ ಕೆಲಸ ಮಾಡಲು ನಿರಾಕರಿಸಿದರೆ, ಅವರನ್ನು ನೌಕರಿಯಿಂದ ತೆಗೆದು ಹಾಕುವಂತೆ ಇಲ್ಲ. ಉತ್ತರ ಪ್ರದೇಶ ಕಾರ್ಮಿಕ ಇಲಾಖೆಯು ತನ್ನ ನಿರ್ಧಾರದ ಅಧಿಸೂಚನೆ ಹೊರಡಿಸಲು ಶುಕ್ರವಾರ ತಡರಾತ್ರಿ ಆದೇಶ ಹೊರಡಿಸಿದೆ. ಸಂಜೆ 7 ಗಂಟೆ ನಂತರ ಮಹಿಳಾ ಕೆಲಸಗಾರರು ಕಚೇರಿಯಲ್ಲಿ ಇರುವಂತೆ ಇಲ್ಲ. ಹಾಗೆಯೇ ಬೆಳಿಗ್ಗೆ 6 ಗಂಟೆ ಒಳಗೆ ಕಚೇರಿಗೆ ಬರಬೇಕೆಂದು ಒತ್ತಾಯಿಸುವ ಹಾಗೆ ಇಲ್ಲ. ಹಾಗೆ ದುಡಿಸಿಕೊಳ್ಳಬೇಕಿದ್ದರೆ, ಅವರ ಲಿಖಿತ ಒಪ್ಪಿಗೆ ಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ರಾಜ್ಯದಲ್ಲಿನ ಎಲ್ಲ ಮಿಲ್‌ಗಳು ಮತ್ತು ಕಾರ್ಖಾನೆಗಳಲ್ಲಿನ ಮಹಿಳಾ ಉದ್ಯೋಗಿಗಳಿಗೆ ಯೋಗಿ ಆದಿತ್ಯನಾಥ್ ಸರ್ಕಾರ ಈ ವಿನಾಯಿತಿ ನೀಡಿದೆ. “ಮಹಿಳಾ ಕೆಲಸಗಾರರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವ ಹೊಣೆ ಉದ್ಯೋಗದಾತರ ಮೇಲೆ ಇದೆ. ಕಚೇರಿ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದಂತಹ ಘಟನೆಗಳನ್ನು ತಡೆಯುವುದು ಅಗತ್ಯ. ಸರ್ಕಾರದ ಆದೇಶವು ಮುಖ್ಯವಾಗಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ, ನಿರ್ಬಂಧ ಮತ್ತು ಪರಿಹಾರ) ಕಾಯ್ದೆ, 2013ರ ನಿಯಮಗಳ ಅಡಿ ಅಥವಾ ಇತರೆ ಸಂಬಂಧಿತ ನಿಯಮಗಳ ಅಡಿ ಕಾರ್ಖಾನೆಯಲ್ಲಿ ಉದ್ಯೋಗದಾತರು ತ್ವರಿತ ದೂರು ವ್ಯವಸ್ಥೆಯನ್ನು ಅಳವಡಿಸುವುದು ಕಡ್ಡಾಯಗೊಳಿಸಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

- Advertisement -
spot_img

Latest News

error: Content is protected !!