Sunday, May 19, 2024
Homeತಾಜಾ ಸುದ್ದಿಬಂಟ್ವಾಳ: ಕಾಶ್ಮೀರದ ಸರ್ಕಾರಿ ಶಾಲೆ ದತ್ತು ಪಡೆಯಲು ಮುಂದಾದ ಕನ್ನಡಿಗ: ಸಚಿವೆ ಶೋಭಾ ಕರಂದ್ಲಾಜೆ ಸಾಥ್‌

ಬಂಟ್ವಾಳ: ಕಾಶ್ಮೀರದ ಸರ್ಕಾರಿ ಶಾಲೆ ದತ್ತು ಪಡೆಯಲು ಮುಂದಾದ ಕನ್ನಡಿಗ: ಸಚಿವೆ ಶೋಭಾ ಕರಂದ್ಲಾಜೆ ಸಾಥ್‌

spot_img
- Advertisement -
- Advertisement -

ಬಂಟ್ವಾಳ: ಕಾಶ್ಮೀರದ ಸರ್ಕಾರಿ ಶಾಲೆಯೊಂದನ್ನು ಕನ್ನಡಿಗನೋರ್ವ ದತ್ತು ಸ್ವೀಕರಿಸಲು ಮುಂದಾಗಿದ್ದಾರೆ. ಹೌದು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೂರದೃಷ್ಟಿ ಯೋಜನೆಗಳನ್ನು ಹಾಕಿಕೊಂಡಿರುವ ಬಂಟ್ವಾಳದ ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಎರಡು ವರ್ಷಗಳಿಂದ ಈ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತಿದ್ದರೂ, ಕೋವಿಡ್‌ನಿಂದಾಗಿ ಸಾಧ್ಯವಾಗಿರಲಿಲ್ಲ. ಈಗ ಕಾಶ್ಮೀರದಲ್ಲಿ ಸರ್ಕಾರಿ ಶಾಲೆ ದತ್ತು ಪಡೆಯಲು ಅವಕಾಶ ನೀಡುವಂತೆ ಜಮ್ಮು ಮತ್ತು ಕಾಶ್ಮೀರ ಗ್ರೂಪ್ ರಾಜ್ಯಪಾಲ ಮನೋಜ್ ಸಿನ್ಹಾಗೆ ಮನವಿ ಸಲ್ಲಿಕೆಯಾಗಿದ್ದು ಶೀಘ್ರ ಸಕಾರಾತ್ಮಕ ಸ್ಪಂದನೆಯ ನಿರೀಕ್ಷೆಯಲ್ಲಿದ್ದಾರೆ.

ಇತ್ತೀಚೆಗೆ ಬಂಟ್ವಾಳದ ದಡ್ಡಲಕಾಡು ಶಾಲೆಯ ನೂತನ ಕೊಠಡಿಗಳು ಮತ್ತು ಕಲಿಕ ಭವನದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಶ್ಮೀರದಲ್ಲಿ ಶಾಲೆ ದತ್ತು ಪಡೆಯುವ ಪ್ರಕಾಶ್ ಅಂಚನ್ ಕನಸಿಗೆ ಪೂರಕವಾಗಿ ಸ್ಪಂದಿಸಿದ್ದರು. ಮುಂದುವರಿದ ಭಾಗವಾಗಿ ಮೇ 25ರಂದು ದೆಹಲಿಯಲ್ಲಿ ಪ್ರಕಾಶ್ ಅಂಚನ್, ಒಂದು ದೇಶ ಒಂದು ಶಿಕ್ಷಣ ಸಮಿತಿಯ ಪ್ರಮುಖರಾದ ಉತ್ತರ ಪ್ರದೇಶದ ಸರ್ವೆಶ್ ಮಿಶಾ., ಸುರೇಂದ, ಸಿಂಗ್ ಅವರ ನಿಯೋಗ ಶೋಭಾ ಅವರನ್ನು ಭೇಟಿ ಮಾಡಿತ್ತು.ಮನವಿಗೆ ಸ್ಪಂದಿಸಿದ ಸಚಿವೆ ಕಾಶ್ಮೀರದ ಗಡಿಯಲ್ಲಿ ಸರ್ಕಾರಿ ಶಾಲೆ ದತ್ತು ಸ್ವೀಕರಿಸಲು ಶ್ರೀ ದುರ್ಗಾ ಚಾರಿಟೆಬಲ್‌ ಟ್ರಸ್ಟ್‌ಗೆ ಅವಕಾಶ ಕಲ್ಪಿಸುವುದಾಗಿ ಭರಸವೆ ನೀಡಿದ್ದಲ್ಲದೆ, ಜಮ್ಮು ಕಾಶ್ಮೀರದ ರಾಜ್ಯಪಾಲರಿಗೆ ಪತ್ರಮುಖೇನ ಮನವಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!