Saturday, June 6, 2026
Homeಕರಾವಳಿಬೆಂಗಳೂರು: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ !

ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ !

- Advertisement -
- Advertisement -

ಬೆಂಗಳೂರು: ಕಿರುತೆರೆಯ ಖ್ಯಾತ ನಟಿ ಸೌಜನ್ಯ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಬೆಲೆಯಲ್ಲಿ ನಡೆದಿದೆ.

ದೊಡ್ಡಬೆಲೆ ಬಳಿಯ ಅಪಾರ್ಟ್ ಮೆಂಟ್ ನ ತಮ್ಮ ನಿವಾಸದಲ್ಲೇ ಸೌಜನ್ಯ (25) ಆತ್ಮಹತ್ಯೆಗೆ ಶರಣಾಗಿದ್ದಾರೆ. ದೊಡ್ಡ ಬೆಲೆ ಗ್ರಾಮದ ಸನ್​ ವರ್ಥ್​​ ಅಪಾರ್ಟ್ ಮೆಂಟ್ ನಲ್ಲಿ ನಟಿ ಸೌಜನ್ಯಾ ಹಾಗೂ ಆಕೆಯ ಬಾಯ್ ಫ್ರೆಂಡ್ ವಾಸವಾಗಿದ್ದರು.

ನಟಿ ಸೌಜನ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಾಲ್ಕು ಪುಟಗಳ ಡೆತ್​​ ನೋಟ್​​ ಬರೆದಿಟ್ಟಿದ್ದಾರೆ. ಡತ್ ನೋಟ್ ನಲ್ಲಿ ‘ನನ್ನ ಸಾವಿಗೆ ನಾನೇ ಕಾರಣ, ನನ್ನನ್ನು ಕ್ಷಮಿಸಿ ಬಿಡಿ’ ಎಂದು ಪತ್ರದಲ್ಲಿ ತಂದೆ-ತಾಯಿ ಬಳಿ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.

ಸೌಜನ್ಯ ಮೂಲತಃ ಕುಶಾಲನಗರದವರಾಗಿದ್ದು, ಕೆಲ ದಿನಗಳಿಂದ ಗೆಳೆಯನೊಂದಿಗೆ ಈ ಅಪಾರ್ಟ್​​ಮೆಂಟ್​​​ನಲ್ಲಿ ವಾಸಿಸುತ್ತಿದ್ದರು. ಕನ್ನಡದ ಹಲವು ಧಾರಾವಾಹಿ ಹಾಗೂ ಚೌಕಟ್ಟು ಮತ್ತೆ ಫನ್​​ ಸಿನಿಮಾಗಳಲ್ಲಿ ನಟಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ತನ್ನ ಗೆಳೆಯನಿಗೆ ಊಟ ತರಲು ಹೇಳಿ ಮನೆಯಿಂದ ಹೊರಕಳುಹಿಸಿದ್ದಳು. ಆತ ಊಟ ತಗೆದುಕೊಂಡು ಮನೆಗೆ ವಾಪಸ್ ಬರೋ ವೇಳೆಗೆ ಸೌಜನ್ಯ ಆತ್ಮಹತ್ಯೆಗೆ ಶರಣಾಗಿದ್ದರಂತೆ. ಅಪಾರ್ಟ್​​ ಮೆಂಟ್​ ಗೆ ಸೌಜನ್ಯಾ ಗೆಳೆಯ ವಾಪಸ್​ ಬಂದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ಕುರಿತು ಮಾಹಿತಿ ಪಡೆದುಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಟಿ ಬಳಿ ಪತ್ತೆಯಾಗಿದ್ದ ಡೆತ್ ನೋಟ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪತ್ರದಲ್ಲಿ ನನಗೆ ಸಾಕಷ್ಟು ಆರೋಗ್ಯ ಸಮಸ್ಯೆ ಇದೆ. ಆದರೆ ಯಾರಿಗೂ ಹೇಳಿಕೊಳ್ಳಲು ಆಗುತ್ತಿಲ್ಲ. ಸಾಕಷ್ಟು ಬಾರೀ ಚಿಕಿತ್ಸೆ ಪಡೆದುಕೊಂಡರು ಆಗುತ್ತಿಲ್ಲ. ಆದ್ದರಿಂದಲೇ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಬರೆದಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!