Sunday, June 7, 2026
Homeಕರಾವಳಿಉಪ್ಪಿನಂಗಡಿ: ನೀರೆಂದುಕೊಂಡು ಪೆಟ್ರೋಲ್ ಸೇವಿಸಿದ ವೃದ್ಧೆ; ಚಿಕಿತ್ಸೆ ಫಲಕಾರಿಯಾಗದೆ ಸಾವು!

ಉಪ್ಪಿನಂಗಡಿ: ನೀರೆಂದುಕೊಂಡು ಪೆಟ್ರೋಲ್ ಸೇವಿಸಿದ ವೃದ್ಧೆ; ಚಿಕಿತ್ಸೆ ಫಲಕಾರಿಯಾಗದೆ ಸಾವು!

- Advertisement -
- Advertisement -

ಉಪ್ಪಿನಂಗಡಿ: ನೀರೆಂದುಕೊಂಡು ಪೆಟ್ರೋಲ್ ಸೇವಿಸಿದ ವೃದ್ದೆಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಪೆರ್ನೆಯ ಸಂಪದಕೋಡಿಯಲ್ಲಿ ನಡೆದಿದೆ.

ಮೃತ ವೃದ್ಧೆಯ‌ನ್ನು ಮೂಲತಃ ಬಂಟ್ವಾಳದ ನಿವಾಸಿಯಾಗಿರುವ ಪದ್ಮಾವತಿ (79) ಎಂದು ಗುರುತಿಸಲಾಗಿದೆ. ಸೆ.26 ರಂದು ಮಗಳ ಮನೆಗೆ ಬಂದಿದ್ದ ಪದ್ಮಾವತಿಯವರು ಹುಲ್ಲು ಕತ್ತರಿಸುವ ಯಂತ್ರಕ್ಕೆಂದು ಮನೆಯವರು ಬಾಟಲಿಯಲ್ಲಿ ಪೆಟ್ರೋ ಲ್ ತಂದಿಟ್ಟಿದ್ದರು. ದೃಷ್ಟಿದೋಷದಿಂದ ಬಳಲುತ್ತಿದ್ದ ಅಜ್ಜಿ, ಪೆಟ್ರೋ ಲ್ ಇದ್ದ ಬಾಟಲಿಯನ್ನ ನೀರೆಂದು ಭಾವಿಸಿ ಕುಡಿದಿದ್ದರು. ಅಸ್ವಸ್ಥರಾಗಿದ್ದ ಅವರನ್ನು ಮಂಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!