Wednesday, June 3, 2026
Homeಕರಾವಳಿಮಂಗಳೂರುಕಡಬ; ವರ್ಷದ ಹಿಂದೆ ನಿವೃತ್ತಿ ಹೊಂದಿದ್ದ ಸೈನಿಕ ಹೃದಯಾಘಾತದಿಂದ ನಿಧನ

ಕಡಬ; ವರ್ಷದ ಹಿಂದೆ ನಿವೃತ್ತಿ ಹೊಂದಿದ್ದ ಸೈನಿಕ ಹೃದಯಾಘಾತದಿಂದ ನಿಧನ

- Advertisement -
- Advertisement -

ಕಡಬ; ವರ್ಷದ ಹಿಂದೆ ನಿವೃತ್ತಿ ಹೊಂದಿದ್ದ ಸೈನಿಕ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಕರಾಳ ಸಮೀಪದ ಅಲಾರ್ಮೆಯಲ್ಲಿ  ನಡೆದಿದೆ. ಪ್ರಭಾಕರನ್ ಮೃತರು.

ಒಂದು ವರ್ಷದ ಹಿಂದೆ ಸೇನೆಯಿಂದ ನಿವೃತ್ತಿ ಪಡೆದು ಊರಿಗೆ ಆಗಮಿಸಿದ್ದ ಅವರು ಅಡ್ಡಗದ್ದೆ ಬಳಿ ಹೆತ್ತವರೊಂದಿಗೆ ಕುಟುಂಬ ಸಮೇತರಾಗಿ ವಾಸವಿದ್ದರು .ರಂಗಸ್ವಾಮಿ ಮತ್ತು ಸೆಲ್ಲಾಯಿ ದಂಪತಿಯ ನಾಲ್ಕು ಮಕ್ಕಳಲ್ಲಿ ಇವರು ಕೊನೆಯ ಮಗನಾಗಿದ್ದರು..ಪ್ರಸ್ತುತ ಮಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದರು. ನಂತರ ಕಡಬ ಕಳಾರ ಬಳಿ ಖರೀದಿಸಿದ್ದ ಜಾಗದಲ್ಲಿ ಮನೆ ನಿರ್ಮಿಸಿದ್ದರು. ಎರಡು ವಾರದ ಹಿಂದೆಯಷ್ಟೇ ಗೃಹ ಪ್ರವೇಶ ಮಾಡಿದ್ದರು.

ಇಂದು ತನ್ನ ಕಾರಿನಲ್ಲಿ ಬರುತ್ತಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ.ಕೂಡಲೇ ಕಡಬ ಸಮುದಾಯ ಆಸ್ಪಗೆ ಆಗಮಿಸಿದ್ದು ಈ ವೇಳೆ ಆಸ್ಪತ್ರೆಯೊಳಗೆ ಕುಸಿದು ಬಿದ್ದಿದ್ದು ಕೂಡಲೇ ಆಸ್ಪತ್ರೆ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆಗೆ ಮುಂದಾಗಿದ್ದರು .ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದುಕೊಂಡು ಹೋಗವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಇಬ್ಬರು ಮಕ್ಕಳು ಹಾಗೂ ಹೆತ್ತವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!