Thursday, June 4, 2026
Homeತಾಜಾ ಸುದ್ದಿಚೆನ್ನೈ: ಎರಡು ಬಸ್ ಗಳ ಮಧ್ಯೆ ಸಿಲುಕಿದರೂ ಬದುಕಿ ಬಂದ ವ್ಯಕ್ತಿ; ಈತನ ಆಯಸ್ಸು ಅದೆಷ್ಟು...

ಚೆನ್ನೈ: ಎರಡು ಬಸ್ ಗಳ ಮಧ್ಯೆ ಸಿಲುಕಿದರೂ ಬದುಕಿ ಬಂದ ವ್ಯಕ್ತಿ; ಈತನ ಆಯಸ್ಸು ಅದೆಷ್ಟು ಗಟ್ಟಿಯಿರಬೇಕು?

- Advertisement -
- Advertisement -

ಚೆನ್ನೈ: ಎರಡು ಬಸ್ ಗಳ ಮಧ್ಯೆ ಸಿಲುಕಿದರೂ ವ್ಯಕ್ತಿಯೊಬ್ಬ ಪವಾಡ ಸದೃಶ್ಯವಾಗಿ ಪಾರಾಗಿರುವ ಘಟನೆ ತಮಿಳುನಾಡಿನ ಪಕ್ಕೋಟ್ ನಲ್ಲಿ ನಡೆದಿದೆ.

ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಎರಡು ಬಸ್‌ಗಳ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ.  ದೃಶ್ಯ ನೋಡಿ ಅಲ್ಲಿದ್ದವು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

ಬಸ್ ಗಳು ಒಂದಕ್ಕೊಂದು ಎದುರಾಗಿ ಅಪಾಯಕಾರಿಯಾಗಿ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ವ್ಯಕ್ತಿ ಎರಡು ಬಸ್ ಗಳ ನಡುವೆ ಕೆಲವು ಸೆಕೆಂಡುಗಳ ಕಾಲ ಸಿಕ್ಕಿ ಹಾಕಿಕೊಂಡಿದ್ದು, ಪ್ರಾಣ ಉಳಿಯುವುದೇ ಅಸಾಧ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಪವಾಡವೆಂಬಂತೆ ಇಬ್ಬರೂ ಬಸ್ ಚಾಲಕರು ಸಕಾಲಕ್ಕೆ ಬ್ರೇಕ್ ಹಾಕಿದ್ದರಿಂದ ಭಾರೀ ಅನಾಹುತ ತಪ್ಪಿದೆ.ಈತನನ್ನು ಇದೀಗ ಜಗತ್ತಿನ ಅತೀ ದೊಡ್ಡ ಲಕ್ಕಿ ಮ್ಯಾನ್ ಎಂದು ಜನ ಬಣ್ಣಿಸುತ್ತಿದ್ದಾರೆ.

- Advertisement -

Latest News

error: Content is protected !!