Thursday, June 4, 2026
Homeಕರಾವಳಿಮಂಗಳೂರುಉಪ್ಪಿನಂಗಡಿ: ತೆಂಗಿನಮರದಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಸಾವು

ಉಪ್ಪಿನಂಗಡಿ: ತೆಂಗಿನಮರದಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಸಾವು

- Advertisement -
- Advertisement -

ಉಪ್ಪಿನಂಗಡಿ: ತೆಂಗಿನಮರದಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ನಡೆದಿದೆ. ಶಿರಾಡಿ ಗ್ರಾಮದ ಪೇರಮಜಲು ಎಡಪ್ಪಾಟ್‌ ನಿವಾಸಿ ವರ್ಕಿ ಇ.ಪಿ. (59) ಮೃತ ದುರ್ದೈವಿ.

ವರ್ಕಿ ಅವರು ಅಡ್ಡಹೊಳೆ ಮಿತ್ತಮಜಲು ಎನ್ನುವಲ್ಲಿರುವ ಸಹೋದರ ಜೋಯಿ ಇ.ಪಿ. ಅವರ ಮನೆಗೆ ಕೆಲಸಕ್ಕೆ ಹೋದವರು ಅಲ್ಲಿ ತೆಂಗಿನಮರ ಏರಿ ಕಾಯಿ ತೆಗೆಯುತ್ತಿರುವಾಗ ಆಕಸ್ಮಿಕವಾಗಿ ಕೈ ಜಾರಿ ಮರದಿಂದ ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದರು. ಅವರನ್ನು ತಕ್ಷಣ ನೆಲ್ಯಾಡಿಯ ಆಸ್ಪತ್ರೆಗೆ ಕರೆತರಲಾಯಿತಾದರೂ, ಆ ವೇಳೆಗೆ ಅವರು ಮೃತಪಟ್ಟಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮೃತರ ಪುತ್ರ ಶ್ಯಾಮ್‌ ಇ.ವಿ. ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!