Thursday, March 28, 2024
Homeತಾಜಾ ಸುದ್ದಿನಾಸಿಕ್ ನಿಂದ ಕೇರಳದ ತಿರುವನಂತಪುರಂಕ್ಕೆ ಬರೋದಿಕ್ಕೆ ಈ ಲಾರಿ ತೆಗೆದುಕೊಂಡಿದ್ದು ಬರೋಬ್ಬರಿ ಒಂದು ವರ್ಷ....

ನಾಸಿಕ್ ನಿಂದ ಕೇರಳದ ತಿರುವನಂತಪುರಂಕ್ಕೆ ಬರೋದಿಕ್ಕೆ ಈ ಲಾರಿ ತೆಗೆದುಕೊಂಡಿದ್ದು ಬರೋಬ್ಬರಿ ಒಂದು ವರ್ಷ….

spot_img
- Advertisement -
- Advertisement -

ಕೇರಳ : ಮಹಾರಾಷ್ಟ್ರದ ನಾಸಿಕ್ ನಿಂದ ಹೊರಟಿದ್ದ ಲಾರಿಯೊಂದು ಬರೊಬ್ಬರಿ ಒಂದು ವರ್ಷದ ಬಳಿಕ ಕೇರಳದ ರಾಜಧಾನಿ ತಿರುವನಂತಪುರಂ ತಲುಪಿದೆ. ಅರೆ ಏನಿದು ಇಷ್ಟೊಂದು ಸಮಯ ಎಂದು ಹುಬ್ಬೇರಿಸಬೇಡಿ. ಇದು ಅಚ್ಚರಿ ಎನ್ನಿಸಿದರೂ ನಿಜ. ಅಂದಹಾಗೆ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಬಾಯಿ ಬಾಹ್ಯಾಕಾಶ ಕೇಂದ್ರಕ್ಕೆ ಅಗತ್ಯವಾಗಿದ್ದ 70 ಟನ್ ತೂಕದ ಏರೋಸ್ಪೇಸ್ ಅನ್ನು ಈ ಮೂಲಕ ಲಾರಿಯಲ್ಲಿ ತರಲಾಗಿದೆ. ಅತಿ ಉದ್ದವಾಗಿದ್ದ ಈ ಏರೋ ಸ್ಪೇಸ್‍ ಆಟೋಕ್ಲೇವ್ ಅನ್ನು 74 ಚಕ್ರಗಳ ಬೃಹತ್ ಲಾರಿ ಆಮೆ ವೇಗದಲ್ಲಿ ಅತ್ಯಂತ ನಾಜೂಕಾಗಿ ಸಾಗಿಸಿದೆ.

ನಾಸಿಕ್ ನಲ್ಲಿ ತಯಾರಾಗಿದ್ದ ಈ ಏರೋಸ್ಪೇಸ್‍ ಆಟೋಕ್ಲೇವ್‍ ಅನ್ನು ಹೊತ್ತ ಲಾರಿ 2019ರ ಜುಲೈ ತಿಂಗಳಿನಲ್ಲಿ ತನ್ನ ಪ್ರಯಾಣ ಆರಂಭಿಸಿತ್ತು. ಲಾರಿಯಲ್ಲಿದ್ದ ಈ ಏರೋಸ್ಪೇಸ್‍ ಆಟೋಕ್ಲೇವ್‍ 70 ಟನ್ ತೂಕ ಹೊಂದಿದ್ದು, 7.5 ಮೀಟರ್ ನಷ್ಟು ಎತ್ತರ ಹಾಗೂ 6.65 ಮೀಟರ್ ನಷ್ಟು ಅಗಲವಾಗಿದೆ. ಇನ್ನು ಈ ಯಂತ್ರ ಹೊತ್ತ ಕಾರ್ಗೋ ಲಾರಿ ದೈತ್ಯವಾಗಿದ್ದು, ಮುಂಭಾಗ ಹಾಗೂ ಹಿಂಭಾಗದಲ್ಲಿ ತಲಾ 32 ಚಕ್ರಗಳಿವೆ.

ಲಾರಿಗೆ 2 ಆಕ್ಸೆಲ್ ಗಳಿದ್ದು, ಒಂದೇ ಭಾಗದಲ್ಲಿ ತೂಕ ಅತಿಯಾಗದಂತೆ ಹಂಚಿಕೆ ಮಾಡಲಾಗಿದೆ. ಕೇವಲ ಡ್ರಾಪ್ ಡೆಕ್ ತೂಕವೇ ಬರೊಬ್ಬರಿ 10 ಟನ್ ಇದ್ದು, ಒಟ್ಟು ಸುಮಾರು 90 ಟನ್ ಸಾಮರ್ಥ್ಯದ ಸರಕನ್ನು ಲಾರಿ ಗಮ್ಯ ಸ್ಥಾನವನ್ನು ತಲುಪಿಸಿದೆ.

ಸಾಮಾನ್ಯವಾಗಿ ಇಷ್ಟು ದೊಡ್ಡ ಸಾಮಾರ್ಥ್ಯದ ಯಂತ್ರಗಳನ್ನು ಲಾರಿಯಲ್ಲಿ ರಸ್ತೆಯ ಮೂಲಕ ಸಾಗಿಸುವುದು ಕೇವಲ ಸಾಹಸವಷ್ಟೇ ಅಲ್ಲ ಅಪಾಯಕಾರಿ ಕೂಡ. ಹೀಗಾಗಿ ಲಾರಿಯ ವೇಗವನ್ನು ಅತ್ಯಂತ ಕಡಿಮೆಗೊಳಿಸಲಾಗಿತ್ತು. ಈ ಕಾರಣದಿಂದ ಲಾರಿ ಪ್ರತಿದಿನ 5 ಕಿಮೀ ಅಂತರವನ್ನು ಕ್ರಮಿಸಿದೆ ಎಂದು ಯಂತ್ರ ಸಾಗಿಸುವ ಜವಾಬ್ದಾರಿ ಹೊತ್ತಿದ್ದ ಕಾರ್ಗೊ ಕಂಪನಿ ಸಿಬ್ಬಂದಿ ತಿಳಿಸಿದ್ದಾರೆ. ಇಂತಹ ಬೃಹತ್ ಗಾತ್ರದ ಯಂತ್ರಗಳನ್ನು ಸರಕು ಸಾಗಿಸುವ ಹಡಗಿನ ಮೂಲಕ ಸಾಗಿಸಲು ಸಾಧ್ಯವಿಲ್ಲ. ಹೀಗಾಗಿ ಸಾಮಾನ್ಯ ರಸ್ತೆಯ ಮೂಲಕ ಲಾರಿಯಲ್ಲಿ ಸಾಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟು 4 ರಾಜ್ಯಗಳನ್ನು ಪ್ರಯಾಣದಲ್ಲಿ ಕ್ರಮಿಸಿರುವ ಲಾರಿಗೆ ಕೊರೊನಾ ಲಾಕ್ ಡೌನ್ ಕೂಡ ಕಾಡಿದೆ. ಸೋಮವಾರ ಬೆಳಗ್ಗೆ ತಿರುವನಂತಪುರಂನ ಇಸ್ರೋ ಕೇಂದ್ರವನ್ನು ಈ ಲಾರಿ ತಲುಪಿದೆ. ಶೀಘ್ರದಲ್ಲೇ ಈ ಏರೋ ಸ್ಪೇಸ್‍ ಆಟೋಕ್ಲೇವ್ ಅನ್ನು ತಿರುವನಂತಪುರಂನ ವಟ್ಟಿಯೊರಕಾವು ಪ್ರದೇಶದಲ್ಲಿರುವ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಜೋಡಿಸಲಾಗುವುದೆಂದು ಇಸ್ರೋ ಮೂಲಗಳು ತಿಳಿಸಿವೆ. ಈ ಯಂತ್ರ ಕಾರ್ಯಾಚರಣೆ ಆರಂಭಿಸಿದರೆ ಭಾರತದ ಬಾಹ್ಯಾಕಾಶದ ಯೋಜನೆಗಳಿಗೆ ಮತ್ತಷ್ಟು ವಿಸ್ತರಣೆ ಸಿಗಲಿದೆ.

- Advertisement -
spot_img

Latest News

error: Content is protected !!