Monday, April 29, 2024
Homeಕರಾವಳಿದಕ್ಷಿಣಕನ್ನಡ; ಕರುವನ್ನು ಅರ್ಧ ತಿಂದು ರಬ್ಬರ್ ಮರಕ್ಕೆ ನೇತು ಹಾಕಿದ ಚಿರತೆ; ಆತಂಕದಲ್ಲಿ ಸ್ಥಳೀಯರು

ದಕ್ಷಿಣಕನ್ನಡ; ಕರುವನ್ನು ಅರ್ಧ ತಿಂದು ರಬ್ಬರ್ ಮರಕ್ಕೆ ನೇತು ಹಾಕಿದ ಚಿರತೆ; ಆತಂಕದಲ್ಲಿ ಸ್ಥಳೀಯರು

spot_img
- Advertisement -
- Advertisement -

ದಕ್ಷಿಣಕನ್ನಡ; ಕರುವನ್ನು ಅರ್ಧ ತಿಂದು ರಬ್ಬರ್ ಮರಕ್ಕೆ ಚಿರತೆಯೊಂದು ನೇತು ಹಾಕಿದ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಕೊಳ್ತಿಗೆ ಗ್ರಾಮ ವ್ಯಾಪ್ತಿಯ ಕಣಿಯಾರುಮಲೆ ರಕ್ಷಿತಾರಣ್ಯದ ಅರ್ತಿಯಡ್ಕ ಎಂಬಲ್ಲಿ  ನಡೆದಿದೆ.
ರಬ್ಬರ್ ಮರವೊಂದರ ಕೊಂಬೆಯಲ್ಲಿ ಸತ್ತ ದನದ ಕರುವಿನ ಕಳೇಬರ ನೇತಾಡುತ್ತಿರುವುದು ಪತ್ತೆಯಾಗಿದ್ದು,  ಚಿರತೆಯೇ ಕರುವನ್ನು ತಿಂದು ಇಲ್ಲಿ ನೇತು ಹಾಕಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಘಟನೆಯ ಬಳಿಕ ಸುತ್ತಮುತ್ತಲಿನ ಜನರಲ್ಲಿ  ಹಾಗೂ ರಬ್ಬರ್ ಟ್ಯಾಪಿಂಗ್ ಗೆ ಹೋಗುವ ಟ್ಯಾಪರ್‌ಗಳಲ್ಲಿ ಆತಂಕ ಮನೆ ಮಾಡಿದೆ. ಮುಂಜಾನೆ ರಬ್ಬರ್ ಟ್ಯಾಪಿಂಗ್‌ಗೆ ಹೋದ ಕಾರ್ಮಿಕರು ತೋಟದ ಮಧ್ಯದ ರಬ್ಬರ್ ಮರವೊಂದರ ಮೇಲೆ ಸತ್ತ ದನದ ಕರು ನೇತಾಡು ತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಕರುವಿನ ರುಂಡವು ಮರದ ಕೊಂಬೆಯ ಮಧ್ಯೆ ಸಿಲುಕಿದ್ದು, ಕೆಳಗೆ ಬೀಳದಂತೆ ಆಧಾರವಾಗಿತ್ತು. ಸತ್ತ ಕರುವಿನ ದೇಹದ ಒಂದಷ್ಟು ಭಾಗವನ್ನು ಸೀಳಿ ಮಾಂಸ ಹೊರ ತೆಗೆದು ಚಿರತೆ ತಿಂದಿದೆ. ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!