Thursday, June 4, 2026
Homeಕರಾವಳಿಉಡುಪಿಕುಂದಾಪುರ: ಅನಾರೋಗ್ಯದಿಂದ ಖಿನ್ನೆತಗೊಳಗಾಗಿ ಹೋಟೆಲ್‌ ಕಾರ್ಮಿಕ ಆತ್ಮಹತ್ಯೆ

ಕುಂದಾಪುರ: ಅನಾರೋಗ್ಯದಿಂದ ಖಿನ್ನೆತಗೊಳಗಾಗಿ ಹೋಟೆಲ್‌ ಕಾರ್ಮಿಕ ಆತ್ಮಹತ್ಯೆ

- Advertisement -
- Advertisement -

ಕುಂದಾಪುರ: ಅತಿಯಾದ ಮದ್ಯ ಸೇವನೆಯಿಂದ ಹಾಗೂ ಅನಾರೋಗ್ಯದಿಂದ ಖಿನ್ನತೆಗೊಳಗಾಗಿ ವ್ಯಕ್ತಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದ ಅಂಪಾರು ಗ್ರಾಮದ ಗುಬ್ಯಾಡಿ ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಪ್ರಭಾಕರ್‌ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರಿನಲ್ಲಿ ಹೊಟೇಲ್‌ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಭಾಕರ್‌ ಶೆಟ್ಟಿ ಗಣೇಶ ಹಬ್ಬಕ್ಕೆ ಊರಿಗೆ ಬಂದಿದ್ರು. ಅನಾರೋಗ್ಯದ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದುಕೊಂಡು ಬಂದಿದ್ರು. ಬಳಿಕ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!