Wednesday, June 3, 2026
Homeತಾಜಾ ಸುದ್ದಿಶಿವಮೊಗ್ಗ: ಸಾವರ್ಕರ್‌ – ಟಿಪ್ಪು ಫೋಟೋ ವಿಷಯಕ್ಕೆ ವಿವಾದ: ಹಿಂದೂ ಯುವಕನಿಗೆ ಚಾಕು ಇರಿತ

ಶಿವಮೊಗ್ಗ: ಸಾವರ್ಕರ್‌ – ಟಿಪ್ಪು ಫೋಟೋ ವಿಷಯಕ್ಕೆ ವಿವಾದ: ಹಿಂದೂ ಯುವಕನಿಗೆ ಚಾಕು ಇರಿತ

- Advertisement -
- Advertisement -

ಶಿವಮೊಗ್ಗ: ಸಾವರ್ಕರ್‌ – ಟಿಪ್ಪು ಫೋಟೋ ವಿಷಯಕ್ಕೆ ವಿವಾದ ಹುಟ್ಟಿಕೊಂಡಿರುವ ಬೆನ್ನಲ್ಲೇ ಯುವಕನೊಬ್ಬನಿಗೆ ಚಾಕು ಇರುದ ಘಟನೆ ಉಪ್ಪಾರ ಕೇರಿ ನಡೆದಿದೆ.

ಪ್ರೇಮ್ ಕುಮಾರ್(22) ಎಂಬಾತನಿಗೆ ಚೂರಿ ಹಾಕಲಾಗಿದೆ. ಗಾಂಧಿ ಬಜಾರ್ ನಲ್ಲಿರುವ ನಂದಿ ಟೆಕ್ಸ್ ಟೈಲ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರೇಮ್ ಕುಮಾರ್ ಗೆ ಗಾಂಧಿ ಬಜಾರ್‌ ನ ಉಪ್ಪಾರ ಕೇರಿ ಸಮೀಪ ಅನ್ಯಕೋಮಿನ ಯುವಕರು ಚಾಕು ಇರಿದಿದ್ದಾರೆ.

ಗಾಯಾಳನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈಗಾಗಲೇ ಸಾವರ್ಕರ್‌ – ಟಿಪ್ಪು ಫೋಟೋ ವಿವಾದದಿಂದಾಗಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇದಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗಾಂಧಿಬಜಾರ್ ಅಂಗಡಿಗಳನ್ನು ಬಂದ್ ಮಾಡಲಾಗಿದೆ.

- Advertisement -

Latest News

error: Content is protected !!