Saturday, May 18, 2024
Homeತಾಜಾ ಸುದ್ದಿಶಿವಮೊಗ್ಗದಲ್ಲಿ ಮತ್ತೋರ್ವ ಯುವಕನಿಗೆ ಚಾಕು ಇರಿತ: ಗಲಾಟೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ

ಶಿವಮೊಗ್ಗದಲ್ಲಿ ಮತ್ತೋರ್ವ ಯುವಕನಿಗೆ ಚಾಕು ಇರಿತ: ಗಲಾಟೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ

spot_img
- Advertisement -
- Advertisement -

ಶಿವಮೊಗ್ಗ: ಇಲ್ಲಿನ ಅಮೀರ್​ ಅಹಮದ್​ ವೃತ್ತದಲ್ಲಿ ಭಾರಿ ಗಲಾಟೆ ನಡೆಯುತ್ತಿದ್ದು, ಇದಾಗಲೇ 22 ವರ್ಷದ ಪ್ರೇಮ್​ ಸಿಂಗ್​ ಎಂಬ ಯುವಕನನ್ನು ಮುಸ್ಲಿಂ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿರುವ ಪ್ರೇಮ್​ ಸಿಂಗ್​ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದರ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಿಡಿಗೇಡಿಗಳು ಮತ್ತೋರ್ವ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿ ಚಾಕು ಇರಿದಿದ್ದಾರೆ. ಅಶೋಕ‌ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಪ್ರವೀಣ್ ಕುಮಾರ್ (27) ಎಂಬ ಯುವಕನಿಗೆ ಚಾಕು ಇರಿದಿದ್ದಾರೆ. ಅಂಗಡಿ ಬಾಗಿಲು ಮುಚ್ಚಿ ಮನೆಗೆ ಹೋಗುವ ಸಂದರ್ಭದಲ್ಲಿ ಚಾಕು ಇರಿಯಲಾಗಿದೆ.

ಚಾಕು ಚುಚ್ಚಿ ಪರಾರಿಯಾಗಿದ್ದಾರೆ ದುಷ್ಕರ್ಮಿಗಳು. ಪ್ರವೀಣ್​ ಅವರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇದಾಗಲೇ ಗಲಾಟೆಯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಗಲಾಟೆ ಮುಂದುವರೆದಿದೆ. ಭಾರಿ ಗಲಾಟೆ ಹಿನ್ನೆಲೆಯಲ್ಲಿ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್​ ನಡೆಸಿದ್ದಾರೆ.

- Advertisement -
spot_img

Latest News

error: Content is protected !!