Saturday, June 6, 2026
Homeಕರಾವಳಿಬೆಳ್ತಂಗಡಿಯ ಕಲ್ಲೇರಿಯಲ್ಲಿ 2 ಕೆಜಿಗೆ 1oo ರೂಪಾಯಿಯಂತೆ ಮೀನು ಮಾರಾಟ; ವಿವಿಧೆಡೆಯಿಂದ ಬಂದು ಮೀನು ಖರೀದಿಗೆ...

ಬೆಳ್ತಂಗಡಿಯ ಕಲ್ಲೇರಿಯಲ್ಲಿ 2 ಕೆಜಿಗೆ 1oo ರೂಪಾಯಿಯಂತೆ ಮೀನು ಮಾರಾಟ; ವಿವಿಧೆಡೆಯಿಂದ ಬಂದು ಮೀನು ಖರೀದಿಗೆ ಮುಗಿಬಿದ್ದ ಜನ

- Advertisement -
- Advertisement -

ಬೆಳ್ತಂಗಡಿ; ಇಲ್ಲಿನ ಕಲ್ಲೇರಿಯಲ್ಲಿ ಇಂದು ಜನ ಮರಳೋ ಜಾತ್ರೆ ಮರಳೋ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಲ್ಲೇರಿಯಲ್ಲಿ 100 ರೂಪಾಯಿಗೆ 2 ಕೆಜಿ ಮೀನು ಮಾರಾಟ ಮಾಡುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಬೇರೆ ಬೇರೆ ಕಡೆಯಿಂದ ಬಂದ ಜನ ಮೀನು ಕೊಳ್ಳೋದಕ್ಕೆ ಮುಗಿ ಬಿದ್ರು.

ಬಂಗುಡೆ, ಬೂತಾಯಿ, ಡಿಸ್ಕೋ ಸೇರಿ ಹಲವು ವಿಧದ ಮೀನುಗಳನ್ನು 2 ಕೆಜಿ 100 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿತ್ತು.  ಸದ್ಯ ಕರಾವಳಿಯಲ್ಲಿ ಮೀನಿನ ದರ ಒಂದು ಕೆಜಿಗೆ 250 ರವರೆಗೆ ಇದೆ. ಆದರೆ ಇಲ್ಲಿ 100 ರೂ.ಗೆ ಮೀನು‌ ಸಿಗುತ್ತದೆ ಎಂದು ಪುತ್ತೂರು, ವಿಟ್ಲ,ಉಜಿರೆ ಬೆಳ್ತಂಗಡಿ ಸೇರಿ ವಿವಿಧೆಡೆಯಿಂದ ಜನರು ಬಂದು ಮೀನು ಖರೀದಿಗೆ ಮುಗಿ ಬಿದ್ದದ್ದರಿಂದ ರಸ್ತೆಯಲ್ಲಿ ಪುಲ್ ಟ್ರಾಫಿಕ್ ಸಮಸ್ಯೆ ಕೂಡ ಎದುರಾಗಿತ್ತು ಪೊಲೀಸರು ಟ್ರಾಫಿಕ್ ನಿಯಂತ್ರಣಕ್ಕೆ ಹರಸಾಹಸ ಪಡುವಂತಾಗಿತ್ತು.

- Advertisement -

Latest News

error: Content is protected !!