Saturday, June 6, 2026
Homeಕರಾವಳಿಉಡುಪಿಉಡುಪಿಯಿಂದ ಸಿಂಗಾಪೂರಕ್ಕೆ ಯುವಕನ ಸೈಕಲ್ ಯಾತ್ರೆ: ಇವರ ಗುಂಡಿಗೆಯನ್ನು ಮೆಚ್ಚಲೇ ಬೇಕು

ಉಡುಪಿಯಿಂದ ಸಿಂಗಾಪೂರಕ್ಕೆ ಯುವಕನ ಸೈಕಲ್ ಯಾತ್ರೆ: ಇವರ ಗುಂಡಿಗೆಯನ್ನು ಮೆಚ್ಚಲೇ ಬೇಕು

- Advertisement -
- Advertisement -

ಉಡುಪಿ; ಎಲ್ಲಿಯ ಸಿಂಗಾಪೂರ ಎಲ್ಲಿಯ ಉಡುಪಿ. ಉಡುಪಿಯಿಂದ ಸಿಂಗಾಪೂರಕ್ಕೆ ಸೈಕಲ್ ಹೋಗೋದು. ಹೀಗಂಥಾ ಯೋಚನೆ ಮಾಡೋದೇ ಕಷ್ಟ. ಅಂಥದ್ರಲ್ಲಿ ಉಡುಪಿಯ ಹೈದನೊಬ್ಬ ಸಿಂಗಾಪೂರಕ್ಕೆ ಸೈಕಲ್ ನಲ್ಲೇ ಯಾತ್ರೆ ಹೊರಟಿದ್ದಾರೆ.

ಬ್ರಹ್ಮಾವರದ ಚೇರ್ಕಾಡಿ ಗ್ರಾಮದ ಹರ್ಷೇಂದ್ರ ಆಚಾರ್ಯ(23) ಎಂಬವರೇ ಇಂತಹ ಮಹತ್ ಸಾಧನೆಯೊಂದಕ್ಕೆ ಮುಂದಾಗಿರುವ ಯುವಕ. ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಸಿಂಗಾಪುರಕ್ಕೆ ಸುಮಾರು 11,000 ಕಿ.ಮಿ ಯಾತ್ರೆ ಕೈಗೊಂಡಿದ್ದಾರೆ. ಹರ್ಷೇಂದ್ರ ಆಚಾರ್ಯ ಸೈಕಲ್ ಮೂಲಕ ಕೇರಳದಿಂದ ಸಿಂಗಾಪೂರಕ್ಕೆ ಯಾತ್ರೆ ಕೈಗೊಂಡಿದ್ದಾರೆ.

ಬ್ರಹ್ಮಾವರದಲ್ಲಿ ಪ್ರೌಢಶಿಕ್ಷಣ ಮತ್ತು ನಿಟ್ಟೆಯಲ್ಲಿ ಡಿಪ್ಲೊಮೋ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಹರ್ಷೇಂದ್ರ ಈ ಮಹತ್ವದ ಸಾಧನೆಗೆ ಇಳಿದಿದ್ದಾರೆ. ಇದಲ್ಲದೆ ಶಿವರಾಮ ಕಾರಂತರ ನಾಟಕ ತಂಡದ ಕಲಾವಿದನಾಗಿದ್ದಾರೆ.ಜೊತೆಗೆ ಉಳಿದವರು ಕಂಡಂತೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ

ಇವರು ರಜಾ ದಿನಗಳಲ್ಲಿ ಲ್ಯಾಂಬ್ರಟ್ ಸ್ಕೂಟರ್ ಮತ್ತು ಜಾವ ಬೈಕ್ ನಲ್ಲಿ ದಕ್ಷಿಣಕನ್ನಡದ ಚಾರಣ ಪ್ರದೇಶಗಳನ್ನು ಸುತ್ತಿರುವ ಹರ್ಷೇಂದ್ರ ಅಕ್ಟೋಬರ್ 2021ರಲ್ಲಿ 2700 ಕಿಲೋಮೀಟರ್ ಕಾಲು ನಡಿಗೆಯಲ್ಲಿ ‘ಕರ್ನಾಟಕದಿಂದ ಕಾಶ್ಮೀರಕ್ಕೆ’ ಹೋಗಿ ‘ಹುಲಿಕುಣಿತ’ ಪ್ರದರ್ಶಿಸಿದ್ದರು. ಆಗಸ್ಟ್ 15 ರಂದು ಕೇರಳದಿಂದ ಸಿಂಗಾಪುರಕ್ಕೆ ಸೈಕಲ್ ಯಾತ್ರೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!