Friday, June 5, 2026
Homeಕರಾವಳಿಹಿರಿಯ ಅಥ್ಲೀಟ್, ಏಷ್ಯನ್ ಗೇಮ್ಸ್ ಪದಕ ವಿಜೇತೆ ಮಂಗಳೂರಿನ ಪೂವಮ್ಮ ಅವರಿಗೆ 2 ವರ್ಷ ನಿಷೇಧ

ಹಿರಿಯ ಅಥ್ಲೀಟ್, ಏಷ್ಯನ್ ಗೇಮ್ಸ್ ಪದಕ ವಿಜೇತೆ ಮಂಗಳೂರಿನ ಪೂವಮ್ಮ ಅವರಿಗೆ 2 ವರ್ಷ ನಿಷೇಧ

- Advertisement -
- Advertisement -

ನವದೆಹಲಿ:ಏಷ್ಯನ್ ಗೇಮ್ಸ್ ಪದಕ ವಿಜೇತೆ ಕ್ರೀಡಾಪಟು, ಮಂಗಳೂರಿನ ಹುಡುಗಿ ಎಂಆರ್ ಪೂವಮ್ಮ ಅವರು ಉದ್ದೀಪನ ಮದ್ದು ಸೇವನೆ ಹಿನ್ನೆಲೆ 2 ವರ್ಷ ನಿಷೇಧಕ್ಕೆ ಒಳಗಾಗಿದ್ದಾರೆ.

ಕಳೆದ ವರ್ಷ ಫೆಬ್ರವರಿ 18 ರಂದು ಪಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ಸಮಯದಲ್ಲಿ 32 ವರ್ಷದ ಪೂವಮ್ಮ ಅವರ ಡೋಪ್ ಮಾದರಿಯನ್ನು ಸಂಗ್ರಹಿಸಲಾಗಿದ್ದು,ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ ರದ್ದು ಮಾಡಿದ್ದ ಉತ್ತೇಜಕ ಮೀಥೈಲ್‌ ಹೆಕ್ಸಾನಿಯಮೈನ್‌ಗೆ ತೆಗೆದುಕೊಂಡಿದ್ದು ಪಾಸಿಟಿವ್​ ಬಂದ ಹಿನ್ನೆಲೆ ಅವರನ್ನು ಮೂರು ತಿಂಗಳು ಅಮಾನತುಗೊಳಿಸಲಾಗಿತ್ತು.

ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆಯ ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ತನಿಖೆ ವೇಳೆ ಪೂವಮ್ಮ ಮದ್ದು ತೆಗೆದುಕೊಂಡಿರುವುದು ಸಾಬೀತಾದ ಕಾರಣ ಪೂವಮ್ಮ ಅವರಿಗೆ ಎರಡು ವರ್ಷಗಳ ಕಾಲ ನಿಷೇಧ ಹೇರಿದೆ.

- Advertisement -

Latest News

error: Content is protected !!