Sunday, June 28, 2026
Homeಕರಾವಳಿಶಾರದೋತ್ಸವಕ್ಕೆ ಶಾರದಾ ಮಾತೆಗೆ ಸೀರೆ ಸಿದ್ದಪಡಿಸುತ್ತಿದೆ ಈ ಮುಸ್ಲಿಂ ಕುಟುಂಬ; ಸಾಮರಸ್ಯತೆ ಸಾಕ್ಷಿಯಾಗಿದೆ ನಮ್ಮ ಕುಡ್ಲ

ಶಾರದೋತ್ಸವಕ್ಕೆ ಶಾರದಾ ಮಾತೆಗೆ ಸೀರೆ ಸಿದ್ದಪಡಿಸುತ್ತಿದೆ ಈ ಮುಸ್ಲಿಂ ಕುಟುಂಬ; ಸಾಮರಸ್ಯತೆ ಸಾಕ್ಷಿಯಾಗಿದೆ ನಮ್ಮ ಕುಡ್ಲ

- Advertisement -
- Advertisement -

ಮಂಗಳೂರು; ಕಳೆದ ಎರಡು ಮೂರು ತಿಂಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಮಂಗಳೂರಿನಲ್ಲಿ ಸಾಮರಸ್ಯ ಬೆಸೆಯುವ ಕೆಲಸವೊಂದು ಸದ್ದಿಲ್ಲದೇ ಸುದ್ದಿಯಾಗದೇ ಸಾಗುತ್ತಿದೆ.

ಇಲ್ಲಿನ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಶಾರದಾ ಮಹೋತ್ಸವದಲ್ಲಿ ಶಾರದಾ ಮಾತೆ ಚಿನ್ನದ ಜರಿಯ ಬನಾರಸ್ ಸೀರೆಯಲ್ಲಿ ಕಂಗೊಳಿಸಲಿದ್ದಾರೆ. ಅದಕ್ಕಾಗಿ ಸೀರೆ ತಯಾರಿ ಕೆಲಸ ಜೋರಾಗಿಯೇ ನಡೆಯುತ್ತಿದೆ. ಈ ಚಿನ್ನದ ಜರಿಯ ಸೀರೆಯನ್ನು ವಾರಾಣಸಿಯ ಮುಸ್ಲಿಂ ಕುಟುಂಬವೊಂದು ಸಿದ್ದಪಡಿಸುತ್ತದೆ ಅನ್ನೋದು ಖುಷಿಯ ಸಂಗತಿ.


ಈ ಬಾರಿ ಸೆ.26ರಿಂದ ಅಕ್ಟೋಬರ್ 5ರವರೆಗೆ ನವರಾತ್ರಿ ಉತ್ಸವ ನಡೆಯಲಿದೆ. ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಠಾಪಿಸುವ ಶಾರದೆಗೆ ಬೆಳ್ಳಿ ಜರಿಯಂಚಿನ ಕೈಮಗ್ಗದ ಬನಾರಸ್ ಸೀರೆ ತೊಡಿಸುವ ಪದ್ಧತಿ ನಡೆದುಕೊಂಡು ಬರುತ್ತಿದೆ.ಇದಕ್ಕೆ ಅಂದಾಜು ಎರಡು‌ ಲಕ್ಷ ವೆಚ್ಚವಾಗುತ್ತದೆ.1922ರಲ್ಲಿ ಪ್ರಾರಂಭವಾದ ಉತ್ಸವಕ್ಕೆ ಈ ಬಾರಿ 100 ವರ್ಷ ತುಂಬಿದ ಪ್ರಯುಕ್ತ ಸುಮಾರು 8 ಲಕ್ಷ ಮೌಲ್ಯದ ಬಂಗಾರದ ಝರಿಯ ಸೀರೆಯಿಂದ ಶಾರದೆ ವಿಗ್ರಹವನ್ನು ಅಲಂಕರಿಸಲು ಸಮಿತಿ ಮುಂದಾಗಿದೆ.

ಈ ಬಾರಿಯೂ ಮಂಗಳೂರಿನ ಕುಲ್ಯಾಡಿಕಾರ್ ಸಿಲ್ಕ್ಸ್‌ನವರೇ ಈ ವೆಚ್ಚದ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ. ವಾರಾಣಾಸಿ ಮುಸ್ಲಿಂ ಕುಟುಂಬವೊಂದು ಈ ಸೀರೆಯನ್ನು ಸಿದ್ಧಪಡಿಸುತ್ತಿದೆ. ನೇಕಾರರ ಕುಟುಂಬ ತಲೆಮಾರುಗಳಿಂದಲೂ ನೇಕಾರಿಕೆಯಲ್ಲಿ ಪರಿಣತಿ ಹೊಂದಿರುವ ಕಾರಣ, ಸೀರೆಯ ಕಸೂತಿಯನ್ನು ಪ್ರತಿವರ್ಷ ಇವರಿಂದಲೇ ಮಾಡಿಸಲಾಗುತ್ತದೆ.

- Advertisement -

Latest News

error: Content is protected !!