Monday, May 20, 2024
Homeಕರಾವಳಿಸ್ನೇಹಿತನಿಗೆ ಬೆದರಿಕೆ ಕರೆ‌ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ತಂಡದಿಂದ ಹಲ್ಲೆ : ನಾಲ್ವರ ಬಂಧನ

ಸ್ನೇಹಿತನಿಗೆ ಬೆದರಿಕೆ ಕರೆ‌ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ತಂಡದಿಂದ ಹಲ್ಲೆ : ನಾಲ್ವರ ಬಂಧನ

spot_img
- Advertisement -
- Advertisement -

ಪುತ್ತೂರು:  ಸ್ನೇಹಿತನಿಗೆ ಬೆದರಿಕೆ ಕರೆ‌ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ತಂಡವೊಂದು ಯುವಕನೊಬ್ಬನಿಗೆ ಹಲ್ಲೆ ನಡೆಸಿದ ಘಟನೆ ಸಪ್ಟಂಬರ್ 17 ರಂದು ನಡೆದಿತ್ತು. ನಿನ್ನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ದರ್ಬೆಯಲ್ಲಿರುವ ಫೈನಾನ್ಸ್‌ ವೊಂದರಲ್ಲಿ ಲೋನ್‌ ರಿಕವರಿ ಕರ್ತವ್ಯ ಮಾಡುತ್ತಿರುವ ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿ ಅವಿನಾಶ್‌ ಹಲ್ಲೆಗೊಳಗಾದವರು.  ಅವರ ಕಿಸೆಯಲ್ಲಿದ್ದ ನಗದನ್ನು ಆರೋಪಿಗಳು ದೋಚಿದ್ದರು.  ಘಟನೆಯಿಂದ ಅವಿನಾಶ್‌ ಅವರ ಕಣ್ಣಿಗೆ ತೀವ್ರ ಗಾಯವಾಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಅವಿನಾಶ್‌ ಅವರ ಗೆಳೆಯ ಸಚಿನ್‌ ಅವರಿಗೆ ಪ್ರತಾಪ್‌ ಕರೆ ಮಾಡಿ ಬೆದರಿಕೆಯೊಡ್ಡಿದ್ದರು. ಈ ಕುರಿತು ಅವಿನಾಶ್‌ ಅವರು ಪ್ರತಾಪ್‌ ಅವರನ್ನು ವಿಚಾರಿಸಿದಾಗ ಪುತ್ತೂರು ಮಹಾಲಿಂಗೇಶ್ವರ ದೇಗುಲದ ಗದ್ದೆಗೆ ಬರುವಂತೆ ತಿಳಿಸಿದ್ದ. ಅದೇ ರೀತಿ ಅಲ್ಲಿ ಪ್ರತಾಪ್‌ ಮತ್ತು ಅಚ್ಚು ಯಾನೆ ಜಗದೀಶ್‌ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಸಂಜೆ ಅವಿನಾಶ್‌ ಅವರು ತನ್ನ ಸ್ನೇಹಿತ ಸಚಿನ್‌ ಜತೆಗೆ ಬಾರ್‌ಗೆ ಹೋಗಿದ್ದು, ಮೇಲಿನ ಅಂತಸ್ತಿನಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಪ್ರತಾಪ್‌, ಅಚ್ಚು ಯಾನೆ ಜಗದೀಶ್‌, ಶರತ್‌, ಅಭಿಜಿತ್‌ ಅವರು ಸಚಿನ್‌ ಮತ್ತು ಅವಿನಾಶ್‌ ಅವರಿಗೆ ಹಲ್ಲೆ ನಡೆಸಿದ್ದಾರೆ. ಇದೀಗ‌ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!