- Advertisement -
- Advertisement -
ಅಯೋಧ್ಯೆ: ಚಳಿಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ದರ್ಶನ ಮತ್ತು ಪೂಜಾ ಸೇವೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ನವೆಂಬರ್ 1ರಿಂದ ನೂತನ ವೇಳಾಪಟ್ಟಿ ಜಾರಿಗೆ ಬರಲಿದ್ದು, ಅಂದಿನಿಂದ ದೇವಾಲಯವು ಬೆಳಗ್ಗೆ 4 ಗಂಟೆಗೆ ತೆರೆಯಲಿದ್ದು, ರಾತ್ರಿ 10 ಗಂಟೆಗೆ ಮುಚ್ಚಲಿದೆ.
ಸದ್ಯ ದೇವಾಲಯವು ಬೆಳಗ್ಗೆ 3.45ಕ್ಕೆ ತೆರೆಯುತ್ತಿದ್ದು, ರಾತ್ರಿ 10.30ಕ್ಕೆ ಮುಚ್ಚಲಾಗುತ್ತಿದೆ. ಹೊಸ ವೇಳಾಪಟ್ಟಿಯಂತೆ ಪ್ರಮುಖ ಆರತಿಗಳು ಬೆಳಗ್ಗೆ 4.30ರಿಂದ 4.40ರವರೆಗೆ, ಮಧ್ಯಾಹ್ನ 12 ಗಂಟೆಗೆ, ಸಂಜೆ 7 ಗಂಟೆಗೆ ಹಾಗೂ ರಾತ್ರಿ 9.30ಕ್ಕೆ ನಡೆಯಲಿವೆ ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.
- Advertisement -


