Saturday, June 6, 2026
Homeಕರಾವಳಿಸುಳ್ಯದ ಅಡ್ಪಂಗಾಯದಲ್ಲಿ ಅಪಘಾತಕ್ಕೆ ಎರಡೂ ಕಾಲು ಕಳೆದುಕೊಂಡ ವೃದ್ಧ

ಸುಳ್ಯದ ಅಡ್ಪಂಗಾಯದಲ್ಲಿ ಅಪಘಾತಕ್ಕೆ ಎರಡೂ ಕಾಲು ಕಳೆದುಕೊಂಡ ವೃದ್ಧ

- Advertisement -
- Advertisement -

ಸುಳ್ಯ : ಅಪಘಾತದಲ್ಲಿ ವೃದ್ಧರೊಬ್ಬರು ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಘಟನೆ ಅಜ್ಜಾವರ ಗ್ರಾಮದ ಅಡ್ಪಂಗಾಯ ಬಸ್ ನಿಲ್ದಾಣ ಬಳಿ ನಡೆದಿದೆ.ಮುದರ ಎಂಬ ವೃದ್ಧರೊಬ್ಬರು ಇನ್ನೋರ್ವ ವ್ಯಕ್ತಿ ಪ್ರಭಾಕರ್ ಎಂಬವರೊಡನೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಬೈಕ್ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ಎರಡೂ ಕಾಲು ತುಂಡಾಗಿ ಗಂಭೀರ ಗಾಯಗೊಂಡಿದ್ದಾರೆ.

ಮಂಡೆಕೋಲಿನಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಮಂಡೆಕೋಲಿನ ಮಾರ್ಗ ಎಂಬಲ್ಲಿಯ ಕೌಶಿಕ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಪ್ರಭಾಕರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಮುದರ ಅವರು ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಅಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ಸಾಗಿಸಿದ್ದಾರೆ.

- Advertisement -

Latest News

error: Content is protected !!