Saturday, June 6, 2026
Homeತಾಜಾ ಸುದ್ದಿಹುಟ್ಟೂರು ಮಂಡ್ಯದ ಕಲ್ಲಹಳ್ಳಿಯಲ್ಲಿ ನಟ ರವಿಪ್ರಸಾದ್ ಮಂಡ್ಯ ಅವರ ಅಂತ್ಯಕ್ರಿಯೆ

ಹುಟ್ಟೂರು ಮಂಡ್ಯದ ಕಲ್ಲಹಳ್ಳಿಯಲ್ಲಿ ನಟ ರವಿಪ್ರಸಾದ್ ಮಂಡ್ಯ ಅವರ ಅಂತ್ಯಕ್ರಿಯೆ

- Advertisement -
- Advertisement -

ಬೆಂಗಳೂರು: ನಿನ್ನೆ ಅನಾರೋಗ್ಯದಿಂದ ನಿಧನರಾದ ಮಗಳು ಜಾನಕಿ ಧಾರಾವಾಹಿ ಖ್ಯಾತಿಯ ನಟ ರವಿಪ್ರಸಾದ್ ಮಂಡ್ಯ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಮಂಡ್ಯ ಜಿಲ್ಲೆಯ ಕಲ್ಲಹಳ್ಳಿಯಲ್ಲಿ ನಡೆಯಿತು.

ಮಂಡ್ಯ ಜಿಲ್ಲೆಯ ಕಲ್ಲಹಳ್ಳಿಯ ರುದ್ರಭೂಮಿಯಲ್ಲಿ ಇಂದು ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಒಕ್ಕಲಿಗರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ಮಂಡ್ಯ ರವಿಯ ಪಾರ್ಥೀವ ಶರೀರಕ್ಕೆ ಪುತ್ರ ರಾಜೀವ್ ಗೌಡ ಅಗ್ನಿಸ್ಪರ್ಶ ಮಾಡಿದರು. ಈ ಮೂಲಕ ಕಿರುತೆರೆ ನಟ ಮಂಡ್ಯ ರವಿ ಪಂಚಭೂತಗಳಲ್ಲಿ ಲೀನರಾದರು. ನೂರಾರು ಜನ ಈ ವೇಳೆ ರವಿ ಅವರಿಗೆ ಅಂತಿನ ನಮನ ಸಲ್ಲಿಸಿದರು.

- Advertisement -

Latest News

error: Content is protected !!