Friday, June 5, 2026
Homeಕರಾವಳಿಸಂಪಾಜೆ: ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋವಿಡ್ 19 ಕಾರ್ಯಪಡೆ ಸಭೆ

ಸಂಪಾಜೆ: ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋವಿಡ್ 19 ಕಾರ್ಯಪಡೆ ಸಭೆ

- Advertisement -
- Advertisement -

ಸಂಪಾಜೆ: ಗ್ರಾಮ ಪಂಚಾಯತ್ ಕೋವಿಡ್ 19 ಕಾರ್ಯಪಡೆ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಂದರಿ ಮುಂದಡ್ಕ ಅದ್ಯಕ್ಶತೆಯಲ್ಲಿ ನಡೆಯಿತು

ಸಭೆಯಲ್ಲಿ ಪ್ರಮುಖವಾಗಿ ಮಲೇರಿಯಾ, ಕೊರೋನಾ, ಡೆಂಗ್ಯೂ ರೋಗದ ಬಗ್ಗೆ ಮುಂಜಾಗ್ರತೆ ಹಾಗೂ ಪೇಟೆಯಲ್ಲಿ ಹೋಟೆಲುಗಳ ಸ್ವಚ್ಛತೆಯ ಬಗ್ಗೆ ಚರ್ಚೆ ನಡೆಸಲಾಯಿತು.
ತೆರೆದು ಇಟ್ಟು ಆಹಾರ ಪದಾರ್ಥಗಳ ಮಾರಾಟ ಇನ್ನಿತರ ಉದ್ಯಮಗಳಲ್ಲಿ ಕೋಳಿ ತ್ಯಾಜ್ಯ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಪ್ರತಿ 15 ದಿನಗಳಿಗೊಮ್ಮೆ ಭೇಟಿ ನೀಡಿ ಪರಿಶೀಲಿಸಲು ತಂಡ ರಚಿಸಲಾಯಿ. ಈ ತಂಡಕ್ಕೆ ದಂಡ ವಿಧಿಸಲು ಅಧಿಕಾರ ನೀಡಲಾಯಿತು

ತುರ್ತು ತಂಡದಲ್ಲಿ ಆರೋಗ್ಯ ಇಲಾಖೆ, ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದು ಪ್ರತಿ ಉದ್ಯಮ ಭೇಟಿ ಮಾಡಲು ಜವಾಬ್ಧಾರಿ ವಹಿಸಲಾಯಿತು

ಈ ಸಭೆಯಲ್ಲಿ ಪಿ. ಡಿ. ಓ ನಾಗರಾಜ,.ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ, ಸದಸ್ಯರು ಗಳಾದ ಸೋಮಶೇಖರ್ .ಹಮೀದ್.ಜಿ. ಕೆ. ನಾಗೇಶ್ ಪಿ. ಆರ್, ಲತೀಶ ಡಿ ಸೋಜಾ, ಲೂಕಸ್, ಆರೋಗ್ಯ ಇಲಾಖೆಯ ಹಿಮಲೇಶ್ವರಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇಲಾಖಾ ಮುಖ್ಯಸ್ಥರು ಉಪಸ್ಥಿತರಿದ್ದರು.

- Advertisement -

Latest News

error: Content is protected !!