Saturday, June 6, 2026
Homeಕರಾವಳಿಬಂಟ್ವಾಳ; ಪುಂಜಾಲಕಟ್ಟೆಯ ಮಾವಿನಕಟ್ಟೆಯಿಂದ ವ್ಯಕ್ತಿ ನಾಪತ್ತೆ; ಪತ್ನಿಯಿಂದ ಪೊಲೀಸರಿಗೆ ದೂರು

ಬಂಟ್ವಾಳ; ಪುಂಜಾಲಕಟ್ಟೆಯ ಮಾವಿನಕಟ್ಟೆಯಿಂದ ವ್ಯಕ್ತಿ ನಾಪತ್ತೆ; ಪತ್ನಿಯಿಂದ ಪೊಲೀಸರಿಗೆ ದೂರು

- Advertisement -
- Advertisement -

ಬಂಟ್ವಾಳ: ಇಲ್ಲಿನ ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆ ನಿವಾಸಿ ಟಿ.ನರಸಿಂಹ ಪೈ (36)ಅವರು ಆ. 21 ರಿಂದ ನಾಪತ್ತೆಯಾಗಿದ್ದಾರೆಂದು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆಯ

ಟಿ. ನರಸಿಂಹ ಪೈ ಅವರು ತಮಿಳುನಾಡಿನಿಂದ ಹಪ್ಪಳ ತಂದು ಮಾವಿನಕಟ್ಟೆ ಎಂಬಲ್ಲಿ ಪ್ಯಾಕಿಂಗ್ ಮಾಡಿ ಅಂಗಡಿಗಳಿಗೆ ಲೈನ್ ಸೇಲ್ ಮಾಡುವ ಕೆಲಸ ಮಾಡಿಕೊಂಡಿದ್ದರು. ಕಳೆದ ಕೊರೆನಾ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಈ ಬಗ್ಗೆ ಹಾಸನ ಬ್ಯಾಂಕ್‌ನಲ್ಲಿ ಮಾತುಕತೆ ನಡೆಸಿ, ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಪತ್ನಿಯನ್ನು ತಾಯಿ ಮನೆಗೆ ಬಿಟ್ಟು ಆ.21 ರಂದು ತೆರಳಿದವರು ವಾಪಾಸ್ ಬಂದಿಲ್ಲ ಎನ್ನಲಾಗಿದೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಇದುವರೆಗೆ ಅವರು ಪತ್ತೆಯಾಗಿಲ್ಲ ಎಂದು ಅವರ ಪತ್ನಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಟಿ.ನರಸಿಂಹ ಅವರು ಸುಮಾರು 6 ಅಡಿ ಎತ್ತರ, ದಪ್ಪ ಶರೀರ, ಬಿಳಿ ಮೈಬಣ್ಣ, ಗಡ್ಡ, ಮೀಸೆ ಹಾಗೂ ತಲೆ ಕೂದಲು ಬಿಟ್ಟಿದ್ದು, ಬಿಳಿ ಬಣ್ಣದ ಪಂಚೆ, ಪಿಸ್ತಾ ಕಲರ್‌ನ ಶರ್ಟ್, ಕನ್ನಡಕ ಧರಿಸಿದ್ದಾರೆ. ಕನ್ನಡ, ಕೊಂಕಣಿ, ಹಿಂದಿ, ತುಳು, ತಮಿಳು ಭಾಷೆ ತಿಳಿದಿದ್ದಾರೆ. ಇವರ ಇರುವಿಕೆಯ ಬಗ್ಗೆ ಕಂಡು ಬಂದರೆ ಪುಂಜಾಲಕಟ್ಟೆ ಪೊಲೀಸ್ ಠಾಣೆ (8277986411)ಅಥವಾ ದ.ಕ.ಜಿಲ್ಲಾ ಕಂಟ್ರೋಲ್ ರೂಂ (0824-9990500)ಗೆ ಸಂಪರ್ಕಿಸಲು ತಿಳಿಸಿದ್ದಾರೆ.

- Advertisement -

Latest News

error: Content is protected !!