Saturday, June 6, 2026
Homeಕರಾವಳಿಮಂಗಳೂರು: ಮದುವೆಯಾಗುವುದಾಗಿ ಭರವಸೆ ನೀಡಿ ಯುವತಿಗೆ ಎಂಟು ಲಕ್ಷ ರೂ. ವಂಚನೆ

ಮಂಗಳೂರು: ಮದುವೆಯಾಗುವುದಾಗಿ ಭರವಸೆ ನೀಡಿ ಯುವತಿಗೆ ಎಂಟು ಲಕ್ಷ ರೂ. ವಂಚನೆ

- Advertisement -
- Advertisement -

ಮಂಗಳೂರು:: ಮದುವೆಯಾಗುವ ಭರವಸೆ ನೀಡಿ ಯುವತಿಯಿಂದ ಎಂಟು ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಂಚಕ ನನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ನ ಬಿನೋಯ್ ಯಾನೆ ಸನತ್ ಶೆಟ್ಟಿ ಬಂಧಿತ ಆರೋಪಿಯಾಗಿದ್ದಾನೆ. ಈತ ಸಂಗಮ್ ಡಾಟ್ ಕಾಮ್ ಎಂಬ ಮೆಟ್ರೋ ಮೇನಿಯಲ್ ವೆಬ್ ಸೈಟ್ ಆರಂಭಿಸಿ ನಕಲಿ ಪ್ರೊಫೈಲ್ ಸೃಷ್ಟಿಸಿ ಡಾಕ್ಟರ್ ಎಂದು ಸುಳ್ಳು ಹೇಳಿ ಸುಮಾರು ಎಂಟು ಲಕ್ಷ ರೂ. ವಂಚಿಸಿದ್ದ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆ.

ವಂಚನೆ ಬಗ್ಗೆ ತಿಂಗಳುಗಳಿಂದ ಆರೋಪಿಯ ಸಾಮಾಜಿಕ ಜಾಲ ತಾಣಗಳ ಬಗ್ಗೆ ಪೊಲೀಸರು ನಿಗಾ ಇರಿಸಿದ್ದು, ಈತ ಮುಂಬೈ, ಹೈದರಾಬಾದ್, ಬೆಂಗಳೂರು ಮೊದಲಾದ ಕಡೆ ವಾಸ್ತವ್ಯ ಬದಲಾಯಿ ಸುತ್ತಿದ್ದ ಈತನ ಲೊಕೇಶನ್ ಹಿಂಬಾ ಲಿಸಿದ ಪೊಲೀಸರು ಈತನ ಬಗ್ಗೆ ಮಾಹಿತಿ ಪಡೆದು ಸುರತ್ಕಲ್ ನ ಮನೆಯಿಂದ ಈತನನ್ನು ನಿನ್ನೆ ಬೆಳಗ್ಗೆ ಬಂಧಿಸ ಲಾಯಿತು. ಈತ ಇದೇ ರೀತಿ ಇನ್ನಿತರ ವಂಚನೆ ನಡೆಸಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

- Advertisement -

Latest News

error: Content is protected !!