Thursday, June 4, 2026
Homeತಾಜಾ ಸುದ್ದಿಸಿದ್ದರಾಮಯ್ಯ ಹತ್ಯೆಗೆ RSS, ಬಿಜೆಪಿ ಸಂಚು ರೂಪಿಸಿದೆ: ಶಿವರಾಮ್ ಗಂಭೀರ ಆರೋಪ

ಸಿದ್ದರಾಮಯ್ಯ ಹತ್ಯೆಗೆ RSS, ಬಿಜೆಪಿ ಸಂಚು ರೂಪಿಸಿದೆ: ಶಿವರಾಮ್ ಗಂಭೀರ ಆರೋಪ

- Advertisement -
- Advertisement -

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಹತ್ಯೆಗೆ ಆರ್ ಎಸ್ಎಸ್ ಮತ್ತು ಬಿಜೆಪಿ ಸಂಚು ರೂಪಿಸಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಮ್ ಅವರು ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಮ್ ಅವರು, ಸಿದ್ದರಾಮಯ್ಯ ಹತ್ಯೆಗೆ ಬಿಜೆಪಿ ಮತ್ತು ಆರ್‌ಎಸ್‍ಎಸ್ ಸಂಚು ಮಾಡಿದೆ. ಅದರ ಟ್ರಯಲ್ ಗುರುವಾರ ಮಡಿಕೇರಿಯಲ್ಲಿ ನಡೆದಿದೆ. ಗಾಂಧೀಜಿಯ ರೀತಿ ಸಾರ್ವಜನಿಕರ ಮಧ್ಯೆಯೇ ಸಿದ್ದರಾಮಯ್ಯರನ್ನು ಕೊಲ್ಲಲು ಬಿಜೆಪಿ, ಆರ್‌ಎಸ್‍ಎಸ್ ಸಂಚು ಮಾಡಿದೆ. ಸಿದ್ದರಾಮಯ್ಯ ಹತ್ಯೆ ಮೂಲಕ ಹಿಂದುಳಿದ ವರ್ಗಗಳ ಮಹಾನ್ ನಾಯಕನ ಯುಗಾಂತ್ಯ ಮಾಡಲು ಬಿಜೆಪಿ ಸಂಚು ಮಾಡಿದೆ ಎಂದು ಅವರು ಕಿಡಿಕಾರಿದ್ದಾರೆ. 

- Advertisement -

Latest News

error: Content is protected !!