Saturday, June 6, 2026
Homeತಾಜಾ ಸುದ್ದಿಮಂಗಳೂರು: ಸುರತ್ಕಲ್‌ ಟೋಲ್‌ ಗೇಟ್‌ ವಿಲೀನಕ್ಕೆ ಪ್ರಾಧಿಕಾರದಿಂದ ಗ್ರೀನ್‌ ಸಿಗ್ನಲ್?

ಮಂಗಳೂರು: ಸುರತ್ಕಲ್‌ ಟೋಲ್‌ ಗೇಟ್‌ ವಿಲೀನಕ್ಕೆ ಪ್ರಾಧಿಕಾರದಿಂದ ಗ್ರೀನ್‌ ಸಿಗ್ನಲ್?

- Advertisement -
- Advertisement -

ಮಂಗಳೂರು: ಹಲವು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿರುವ ಸುರತ್ಕಲ್‌ ಎನ್‌ಐಟಿಕೆ ಸಮೀಪದ ಟೋಲ್‌ ಗೇಟ್‌ ವಿಲೀನಕ್ಕೆ ಕೊನೆಗೂ ಕೇಂದ್ರದ ಹೆದ್ದಾರಿ ಇಲಾಖೆ ಪ್ರಾಧಿಕಾರ ಅಸ್ತು ಎಂದಿದೆ. ಸುರತ್ಕಲ್ ಟೋಲ್‌ ಪ್ಲಾಜಾವನ್ನ ಹೆಜಮಾಡಿ ಮತ್ತು ತಲಪಾಡಿ ಟೋಲ್ ಗೇಟ್ ನೊಂದಿಗೆ ವಿಲೀನ ಮಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಾಧಿಕಾರದ ಚೇರ್ಮನ್ ಈ ಸಂಬಂಧ ಸುರತ್ಕಲ್ ಟೋಲ್ ಗೇಟ್ ತೆಗೆದು ಹಾಕಿ ಇತರ ಎರಡು ಟೋಲ್ ಗೇಟ್ ನೊಂದಿಗೆ ಶುಲ್ಕವನ್ನು ವಿಧಿಸಲು ಬೇಕಾದ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇವಲ ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸಿದರೆ ದುಪ್ಪಟ್ಟು ದರವನ್ನು ವಾಹನ ಸವಾರರು ನೀಡುವ ಸಂದರ್ಭ ಮತ್ತೆ ಪ್ರತಿಭಟನೆಯ ಬಿಸಿ ಎದುರಿಸಬೇಕಾಗುತ್ತದೆ ಎಂಬ ನಿಟ್ಟಿನಲ್ಲಿ ಎರಡು ಟೋಲ್ ಗೇಟ್ ಗಳಲ್ಲಿ ಶುಲ್ಕವನ್ನ ಹಂಚಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!