Friday, June 5, 2026
Homeತಾಜಾ ಸುದ್ದಿನೂಪುರ್‌ ಶರ್ಮಾ ಧರ್ಮ ನಿಂದನೆ ಮಾಡಿದ್ದಾಳೆ: ಆಕೆಯ ವಿರುದ್ಧ ಸೇಡು ತೀರಿಸಿಕೊಳ್ತೇವೆ: ಅಲ್‌ಖೈದಾ ಎಚ್ಚರಿಕೆ

ನೂಪುರ್‌ ಶರ್ಮಾ ಧರ್ಮ ನಿಂದನೆ ಮಾಡಿದ್ದಾಳೆ: ಆಕೆಯ ವಿರುದ್ಧ ಸೇಡು ತೀರಿಸಿಕೊಳ್ತೇವೆ: ಅಲ್‌ಖೈದಾ ಎಚ್ಚರಿಕೆ

- Advertisement -
- Advertisement -

ನವದೆಹಲಿ: ನೂಪುರ್‌ ಶರ್ಮಾ ವಿರುದ್ಧ ಸೇಡು ತೀರಿಸಿಕೊಳ್ತೇವೆ ಎಂದು ಅಲ್ ಖೈದಾ ತನ್ನ ಪ್ರಚಾರ ನಿಯತಕಾಲಿಕೆ ‘ನವೈ ಘಜ್ವಾ-ಎ-ಹಿಂದ್’ ನಲ್ಲಿ ಹೇಳಿದೆ.

ನೂಪುರ್ ಶರ್ಮಾ ಧರ್ಮನಿಂದನೆ ಮಾಡಿದ್ದಾಳೆ, ಆಕೆಗೆ ಶಿಕ್ಷೆಯಾಗಬೇಕು ಎಂದು ಅಲ್ ಖೈದಾ ಹೇಳಿದೆ. ಇದಕ್ಕಾಗಿ ಮುಸ್ಲಿಮರನ್ನು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಪ್ರೇರೇಪಿಸಿದೆ.. ಅಲ್ ಖೈದಾ ಮುಸ್ಲಿಮರನ್ನು ಜಿಹಾದ್ ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಳ್ಳುವಂತೆ ಹೇಳಿದೆ.

ಅದರೊಂದಿಗೆ ಕಾಶ್ಮೀರದಲ್ಲಿ ಜಿಹಾದ್ ನಡೆಸುವ ಅಂಶವನ್ನೂ ಕೂಡ ಅಲ್‌ಖೈದಾ ಪುನರುಚ್ಚರಿಸಿದೆ. ಈ ಹಿಂದೆ ದೆಹಲಿ, ಮುಂಬೈ, ಯುಪಿ ಮತ್ತು ಗುಜರಾತ್‌ನಲ್ಲಿ ಆತ್ಮಹತ್ಯಾ ದಾಳಿ ನಡೆಸುವುದಾಗಿ ಅಲ್ ಖೈದಾ ಬೆದರಿಕೆ ಹಾಕಿತ್ತು. ಅಲ್‌ಖೈದಾ ನೀಡಿದ ಈ ಬೆದರಿಕೆ ಬಳಿಕ, ಗುಪ್ತಚರ ಇಲಾಖೆಯು ನೂಪುರ್‌ ಶರ್ಮ ಅವರ ಮೇಲಿನ ಭದ್ರತೆಯನ್ನು ಹೆಚ್ಚಳ ಮಾಡಿದ್ದವು. ಪ್ರಸ್ತುತ ನೂಪುರ್ ಶರ್ಮ ಅವರಿಗೆ ಗುಪ್ತ ಸ್ಥಳದಲ್ಲಿ ಪೊಲೀಸ್‌ ಭದ್ರತೆಯಲ್ಲಿದ್ದಾರೆ. ಇತ್ತೀಚಿನ ಜೀವ ಬೆದರಿಕೆಯ ಪ್ರಕರಣಗಳ ಬಳಿಕ ಸರ್ಕಾರ, ಆಕೆಗೆ ನೀಡಲಾಗಿರುವ ಭದ್ರತೆಯನ್ನು ಇನ್ನಷ್ಟು ಹೆಚ್ಚಳ ಮಾಡಿದೆ.

- Advertisement -

Latest News

error: Content is protected !!