Sunday, June 7, 2026
HomeUncategorizedವಿಶ್ವ ಹಿಂದೂ ಪರಿಷತ್ ಮಡಂತ್ಯಾರು ವಲಯದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ

ವಿಶ್ವ ಹಿಂದೂ ಪರಿಷತ್ ಮಡಂತ್ಯಾರು ವಲಯದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ

- Advertisement -
- Advertisement -

ಮಡಂತ್ಯಾರು; ದೇಶ ವಿಭಜನೆಯ ಕರಾಳ ದಿನದ ನೆನಪಿಗಾಗಿ ಮತ್ತು ಅಖಂಡ ಭಾರತ ಮರುನಿರ್ಮಾಣದ ಸಂಕಲ್ಪದೊಂದಿಗೆ ವಿಶ್ವ ಹಿಂದೂ ಪರಿಷತ್ ಮಡಂತ್ಯಾರು ವಲಯದ ವತಿಯಿಂದ ಪಂಜಿನ ಮೆರವಣಿಗೆ ನಡೆಯಿತು. ಸಂಜೆ 6.30 ಕ್ಕೆ ಪುಂಜಾಲಕಟ್ಟೆ ಗೋಪಾಲಕೃಷ್ಣ ದೇವಸ್ಥಾನದ ಬಳಿಯಿಂದ ಆರಂಭವಾದ ಮೆರವಣಿಗೆ ಮಡಂತ್ಯಾರು ಗಣಪತಿ ಮಂಟಪದ ಬಳಿ ಸಂಪನ್ನಗೊಂಡಿತು. 

ಆ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ಮಚ್ಚಿನ ಘಟಕದ ಅಧ್ಯಕ್ಷರಾದ ನಾರಾಯಣ ನಾವುಡ ಇವರು ವಹಿಸಿದ್ದರು. ನಿವೃತ್ತ ಸೈನಿಕರಾದ ಶ್ರೀ ಮಾಧವ ನಾಯ್ಕ ಇವರು ಧ್ವಜಾರೋಹಣ ನೆರವೇರಿಸಿದರು. ಸಂಸ್ಕಾರ ಭಾರತಿಯ ಮಂಗಳೂರು ವಿಭಾಗದ ಸಂಯೋಜಕರಾದ ಮಾಧವ ಭಂಡಾರಿ ಇವರು ದಿಕ್ಸೂಚಿ ಭಾಷಣ ಮಾಡಿದರು. ನಂದಕುಮಾರ್ ಇವರು ಕಾರ್ಯಕ್ರಮ ನಿರೂಪಿಸಿದರು.

- Advertisement -

Latest News

error: Content is protected !!