Saturday, June 6, 2026
Homeಕರಾವಳಿಉಡುಪಿಉಡುಪಿ: ಗನಕ್ಕೇರಿದ ಮೀನಿನ ದರ: ಬೆಲೆ ಕೇಳಿ ಗ್ರಾಹಕರು ಶಾಕ್!‌

ಉಡುಪಿ: ಗನಕ್ಕೇರಿದ ಮೀನಿನ ದರ: ಬೆಲೆ ಕೇಳಿ ಗ್ರಾಹಕರು ಶಾಕ್!‌

- Advertisement -
- Advertisement -

ಉಡುಪಿ: ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಜಿಲ್ಲೆಯಾದ್ಯಂತ ಜನ ತತ್ತರಿಸಿಹೋಗಿದ್ದಾರೆ. ಈ ನಡುವೆ ಮೀನುಗಾರರಿಗೆ ಕಡಲಿಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇದೆಲ್ಲದರ ಎಫೆಕ್ಟ್‌ ಮೀನು ಖರೀದಿಸುವ ಗ್ರಾಹಕರ ಮೇಲೂ ಬಿದ್ದಿದೆ.

ಹವಾಮಾನ ವೈಪರೀತ್ಯದಿಂದ ಮೀನುಗಾರರು ಕಡಲಿಗಿಳಿಯಲು ಸಾಧ್ಯವಾಗ್ತಿಲ್ಲ. ಇದೀಗ ಮಾರುಕಟ್ಟೆಯಲ್ಲಿ ಎಲ್ಲಾ ಬಗೆಯ ಮೀನುಗಳ ದರ ದುಪ್ಪಟ್ಟಾಗಿದೆ. ಬೂತಾಯಿ ಮೀನಿಗೆ ಪ್ರತಿ ಕೆಜಿ 250ಕ್ಕೆ ತಲುಪಿದೆ. ನೂರು ರೂಪಾಯಿ ಇದ್ದ ಬಂಗುಡೆಯ ದರ 250 ರೂಪಾಯಿ ಆಗಿದೆ. ಪಾಂಪ್ಲೆಟ್ ಗೆ ಈಗಿನ ಧಾರಣೆ ಪ್ರತಿ ಕೆಜಿಗೆ ಒಂದು ಸಾವಿರ ರೂಪಾಯಿ ದಾಟಿದೆ. 500 ರೂಪಾಯಿ ಇದ್ದ ಸಣ್ಣ ಪಾಂಪ್ಲೆಟ್ ನ ದರ 700 ರೂಪಾಯಿ ಆಗಿದೆ. ಅಂಜಲ್ ಮೀನು ಪ್ರತಿ ಕೆಜಿಗೆ 1200 ರೂಪಾಯಿ ತಲುಪಿದೆ. ಸಿಹಿ ನೀರಿನಲ್ಲಿ ಸಿಗುವ ಮೀನು ಮಾರುಕಟ್ಟೆಗೆ ಬರುತ್ತಿದ್ದು ಅವುಗಳ ಧಾರಣೆಯೂ ಹೆಚ್ಚಾಗಿದೆ.

- Advertisement -

Latest News

error: Content is protected !!