Friday, June 5, 2026
Homeತಾಜಾ ಸುದ್ದಿಬಿಲ್ಡಿಂಗ್ ಸ್ಟೋನ್ ಮತ್ತು ಕ್ರಷರ್ ನಿಯಮ ಸರಳೀಕರಣಗೊಳಿಸುವ ಕುರಿತು ಗಣಿ ಸಚಿವರ ನೇತೃತ್ವದಲ್ಲಿ ಸಭೆ

ಬಿಲ್ಡಿಂಗ್ ಸ್ಟೋನ್ ಮತ್ತು ಕ್ರಷರ್ ನಿಯಮ ಸರಳೀಕರಣಗೊಳಿಸುವ ಕುರಿತು ಗಣಿ ಸಚಿವರ ನೇತೃತ್ವದಲ್ಲಿ ಸಭೆ

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಬಿಲ್ಡಿಂಗ್ ಸ್ಟೋನ್ ಮತ್ತು ಕ್ರಷರ್ ನಿಯಮಗಳನ್ನು ಸರಳೀಕರಣಗೊಳಿಸುವ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಆಚಾರ್ ಹಾಲಪ್ಪ ಬಸಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಿತು.

ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಕ್ರಷರ್ ಹಾಗೂ ಬಿಲ್ಡಿಂಗ್ ಸ್ಟೋನ್ ಗಳ ಲಭ್ಯತೆಯ ಕುರಿತಂತೆ ನಿಯಮಾವಳಿಗಳನ್ನು ಸರಳೀಕರಣಗೊಳಿಸಿ ಸಚಿವ ಸಂಪುಟಕ್ಕೆ ಶಿಫಾರಸು ಮಾಡುವ‌ ಕುರಿತು ಚರ್ಚೆ ನಡೆಯಿತು‌.

ಸಭೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ರಮೇಶ್ ಟಿ.ಎಸ್, ಜಂಟಿ ನಿರ್ದೇಶಕರಾದ ಲಕ್ಷ್ಮಮ್ಮ, ರಾಜ್ಯ ಕ್ವಾರಿ ಮಾಲಕರ ಸಂಘದ ಅದ್ಯಕ್ಷರಾದ ರವೀಂದ್ರ ಶೆಟ್ಟಿ ಕಾರ್ಕಳ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕ್ವಾರಿ ಮಾಲಕರ ಸಂಘದ ಅಧ್ಯಕ್ಷರ ಮನೋಜ್ ಶೆಟ್ಟಿ, ರಾಜ್ಯದ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!